Hukkeri

ಅಂಗವಿಕಲರಿಗೆ ಯಂತ್ರ ಚಾಲಿತ ತ್ರಿಚಕ್ರ ವಾಹನ ವಿತರಿಸಿದ ಸಚಿವ ಉಮೇಶ ಕತ್ತಿ

Share

ಹುಕ್ಕೇರಿ ಮತಕ್ಷೇತ್ರದ ಅಂಗವಿಕಲರಿಗೆ ಯಂತ್ರ ಚಾಲಿತ ತ್ರಿಚಕ್ರ ವಾಹನ ವಿತರಣಾ ಸಮಾರಂಭವನ್ನು ಸಚಿವ ಉಮೇಶ ಕತ್ತಿ ನೇರವೇರಿಸಿದರು.

ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ವತಿಯಿಂದ 2020 – 21 ನೇ ಸಾಲಿನ ಯಂತ್ರ ಚಾಲಿತ ತ್ರೀಚಕ್ರ ವಾಹನ ಯೋಜನೆಯ ಅಡಿಯಲ್ಲಿ ಹುಕ್ಕೇರಿ ಮತಕ್ಷೇತ್ರದ ಫಲಾನುಭವಿಗಳಿಗೆ ಅರಣ್ಯ ಮತ್ತು ಆಹಾರ ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ ಕತ್ತಿ ವಾಹನಗಳನ್ನು ವಿತರಿಸಿದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಉಮೇಶ ಕತತಿ ಅವರು ಸರ್ಕಾರ ಕೊರೊನಾ ನಿಯಮಗಳನ್ನು ಕೈ ಬಿಡಬೇಕು ಜನರು ತಮ್ಮ ಜೀವ ರಕ್ಷಣೆಗಾಗಿ ಸಾಮಾಜಿಕ ಅಂತರ, ಮಾಸ್ಕ ಧರಿಸುವದು ಹಾಗೂ ಹಬ್ಬ ಹರಿದಿನ, ಮದುವೆ ಸಮಾರಂಭಗಳಲ್ಲಿ ಜನ ಸೇರುವುದನ್ನು ಕಡಮೆ ಮಾಡಬೇಕು ಎಂದು ಸಲಹೆ ನೀಡಿದರು.

ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ ತಾಲೂಕಾ ಪಂಚಾಯತ ಆವರಣದಲ್ಲಿ ಸಸಿ ನೇಡುವ ಕಾರ್ಯಕ್ರಮ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪರಗೌಡಾ ಪಾಟೀಲ, ಜಯಗೌಡಾ ಪಾಟೀಲ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಿ ಕೆ ಲಾಳಿ, ಉಮೇಶ ಸಿದ್ನಾಳ, ತಾಲೂಕಾ ನೋಡಲ್ ಅಧಿಕಾರಿ ಹೋಳೆಪ್ಪಾ ಎಚ್, ಚಂದ್ರಕಾಂತ ತಳವಾರ, ಸಂಜು ಕರಿಗಾರ, ರಮೇಶ ಮಾದರ ಮತ್ತು ಫಲಾನುಭವಿಗಳಾದ ಶಂಕರಗೌಡಾ ಯಡೂರಿ, ಜಾಸ್ಮೀನ ಖಾಜಿ, ಗಂಗಾಧರ ಗುಡಗೆ, ಸೋಹಿಲ್ ಶಿಲ್ಲೆದಾರ ಉಪಸ್ಥಿತರಿದ್ದರು.

Tags:

error: Content is protected !!