Gokak

ಅಂಕಲಗಿ ಪಿ.ಎಸ್.ಐ ವಿರುದ್ದ ದಲಿತ ಸಂಘಟನೆಗಳ ಪ್ರತಿಭಟನೆ, ತಕ್ಷಣ ವರ್ಗಾವಣೆ ಮಾಡಲು ಒತ್ತಾಯ,

Share

ನ್ಯಾಯ ಕೇಳಲು ಹೋದ ದಲಿತ ಮುಖಂಡನ ಮೇಲೆ ಪಿ.ಎಸ್.ಐ. ಒಬ್ಬರು ಅವಾಜ ಹಾಕಿದ್ದಲ್ಲದೆ ತನ್ನ ಅಧಿಕಾರದ ದುರಪಯೋಗ ಪಡೆಸಿಕೊಂಡು ಆ ಮುಖಂಡನ ಮೇಲೆ ಐ.ಪಿ.ಸಿ ಸೆಕ್ಷನ್ 307 ಪ್ರಕರಣ ದಾಖಲಿಸಿದ್ದ ಘಟನೆ ಗೋಕಾಕ ತಾಲೂಕಿನ ಅಂಕಲಗಿ ಪೆÇೀಲಿಸ್ ಠಾಣೆಯಲ್ಲಿ ನಡೆದಿದೆ.

ಗೋಕಾಕ ತಾಲೂಕಿನ ಕುಂದರಗಿ ಗ್ರಾಮದ ಕಲ್ಲಪ್ಪ ಪುಂಡಲೀಕ ಮಾದರ ಈತನ ಮನೆಗೆ ಸ್ಥಳಿಯರ ಜೊತೆ ಪೆÇೀಲಿಸ್ ಅಧಿಕಾರಿ ಸೇರಿ ಕಲ್ಲಪ್ಪ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆತನ ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಅಂಕಲಗಿ ಪೆÇೀಲಿಸ್ ಠಾಣೆಗೆ ದೂರು ದಾಖಲಿಸಿದ್ದನ್ನು ಪಿ.ಎಸ್.ಐ. ಪ್ರಕಾಶ ರಾಥೋಡ ಇವರು ತಪ್ಪಿಸ್ಥರ ಮೇಲೆ ಕ್ರಮಕೈಗೊಳ್ಳದೆ ಇದ್ದಾಗ ದಲಿತ ಮುಖಂಡ ಕರೆಪ್ಪಾ ಗುಡೆನ್ನವರ ಇವರು ವಿಚಾರಿಸಲು ಹೋದ ಸಮಯದಲ್ಲಿ ಪಿ.ಎಸ್.ಐ. ಪ್ರಕಾಶ ರಾಥೋಡ ಇವರು ನ್ಯಾಯ ಕೊಡಿಸುವ ಬದಲಾಗಿ ತಿರುಗಿ ಹಲ್ಲೆ ಮಾಡಿದ್ದಾರೆ.

ಕರಿಂಸಾಬ ಅಕಾನಸಾಬ ದೇಸಾಯಿ ಮತ್ತು ಮುಖಂಡ ಸಾಹೇಬಸಾಬ ದೇಸಾಯಿ ಇವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳದೆ ಅನ್ಯಾಯಕ್ಕೊಳಗಾದ ಪುಂಡಲೀಕ ಮಾದರ ಹಾಗೂ ಅರ್ಜುನ ಗುಡೆನ್ನವರ ಇವರ ಮೇಲೆ ಐ.ಪಿ.ಸಿ ಸೆಕ್ಷೆನ್ 307 ಪ್ರಕರಣ ದಾಖಲಿಸಿ ತನ್ನ ಅಧಿಕಾರದ ದರ್ಪ ತೋರಿದ್ದಾನೆಂದು ಗೋಕಾಕದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ ಕಚೇರಿ ತನಕ ಪಾದಯಾತ್ರೆ ಮಾಡಿ ದಲಿತರನ್ನು ತಪ್ಪಿಸ್ಥರ ಜೊತೆ ಕೈ ಜೋಡಿಸಿದ ಅಂಕಲಗಿ ಪಿ.ಎಸ್.ಐ. ಪ್ರಕಾಶ ರಾತೋಡ ಇವರನ್ನು ತಕ್ಷಣ ವರ್ಗಾವಣೆ ಮಾಡಿ ಆದೇಶಿಸಿ ನ್ಯಾಯ ದೊರಕಿಸಲು ಹಲವಾರು ಜನ ದಲಿತ ಮುಖಂಡರು ತಹಶೀಲ್ದಾರ್ ಮುಖಾಂತರ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.

ಒಂದು ವೇಳೆ ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳದಿದ್ದಲ್ಲಿ ಪೆÇೀಲಿಸ ವರಿμÁ್ಟಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಣೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಭೀಮ ಆರ್ಮಿಯ ಅಧ್ಯಕ್ಷರಾದ ಸುನೀಲ ಕೊಟಬಾಗಿ, ಸಂತೋಷ ದೊಡ್ಡಮನಿ, ಸತ್ತೆಪ್ಪ ಕರವಾಡಿ, ಲಕ್ಷಣ ದರ್ಮಟ್ಟಿ ಸೇರಿದಂತೆ ಹಲವಾರು ದಲಿತ ಮುಖಂಡರು ಉಪಸ್ಥಿತರಿದ್ದರು.

Tags:

error: Content is protected !!