hubbali

ಮೂರುಸಾವಿರ ಮಠದ ಸುತ್ತ ಅನುಮಾನದ ಹುತ್ತ, ಮತ್ತೆ ಮುನ್ನೆಲೆಗೆ ಬಂದ ಮಠದ ಉತ್ತರಾಧಿಕಾರಿ ವಿವಾದ

Share

ಮೂರುಸಾವಿರ ಮಠದ ಆಸ್ತಿ ವಿವಾದ ಈಗ ಮತ್ತೊಂದು ತಿರುವು ಪಡೆದುಕೊಳ್ತಾ ಇದೆ. ಇಷ್ಟು ದಿನ ಕೆಎಲ್ ಇ ಕಾಲೇಜಿಗೆ ಆಸ್ತಿ ನೀಡಿದ ವಿಚಾರ ವಿವಾದಕ್ಕೆ ಕಾರಣವಾಗುತ್ತು. ಈಗ ಮತ್ತೆ ಉತ್ತರಾಧಿಕಾರಿ ವಿವಾದವು ಮುನ್ನಲೆಗೆ ಬಂದಿದ್ದು, ಮೂಜಗು ಶ್ರೀಗಳು ಮಠ ಬಿಟ್ಟು ಹೋಗಲು ಸಿದ್ದರಾದ್ರ ಎನ್ನುವ ಚರ್ಚೆ ಶುರುವಾಗಿದೆ.

ಹುಬ್ಬಳ್ಳಿಯ ಮೂರುಸಾವಿರಮಠದ ವಿವಾದ ಸದ್ಯಕ್ಕೆ ಮುಗಿಯುವ ಹಾಗೆ ಕಾಣುತ್ತಿಲ್ಲ. ವಿವಾದಕ್ಕೆ ತೆರೆ ಎಳೆಯಬೇಕಿದ್ದ ಮಠದ ಉನ್ನತ ಸಮಿತಿಯವರು ಮೌನಕ್ಕೆ ಶರಣಾಗಿರೋದು ದಿನೆ ದಿನೆ ವಿವಾದ ಹೊಸ ತಿರುವು ಪಡೆದುಕೊಳ್ಳಲು ಕಾರಣವಾಗಿದೆ. ಕೆಎಲ್ಇ ಸಂಸ್ಥೆಗೆ ಮಠದ ಭೂಮಿ ನೀಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದ್ದು ಆಸ್ತಿ ಮರಳಿಸುವಂತೆ ದಿಂಗಾಲೇಶ್ವರ ಶ್ರೀ ಹೋರಾಟ ನಡೆಸಿದ್ದಾರೆ. ಇದರ ನಡುವೆ ಈಗ ಮತ್ತೆ ಮಠದ ಉತ್ತರಾಧಿಕಾರಿ ವಿಚಾರವು ಮುನ್ನೆಲೆಗೆ ಬಂದಿದೆ.

ಕಳೆದ ರಾತ್ರಿ ಇದ್ದಕ್ಕಿದ್ದಂತೆ ತಿಪಟೂರಿನ ರುದ್ರಮುನಿ ಸ್ವಾಮಿಗಳು ಮೂರುಸಾವಿರ ಮಠಕ್ಕೆ ಬೇಟಿ ನೀಡಿದ್ರು. ಮೂಜಗು ಶ್ರೀಗಳ ಜೊತೆ ಗುಪ್ತ ಸಭೆ ನಡೆಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ಉನ್ನತ ಸಮಿತಿ ಸದಸ್ಯ ಶಂಕ್ರಣ್ಣ ಮುನವಳ್ಳಿ ಸಹ ನೇರವಾಗಿ ಮಠಕ್ಕೆ ಬಂದು ಸ್ವಾಮಿಜಿಗಳ ಜೊತೆಗೆ ಚರ್ಚೆ ನಡೆಸಿದ್ರು. ತಡರಾತ್ರಿ ಸ್ವಾಮಿಜಿಗಳಿಬ್ಬರ ಸಭೆ ಹಲವು ಅನುಮಾನಗಳನ್ನ ಭಕ್ತರಲ್ಲಿ ಹುಟ್ಟು ಹಾಕಿದ್ದು, ಉತ್ತರಾಧಿಕಾರಿ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಶಂಕರಣ್ಣ ಮುನ್ನವಳ್ಳಿ ಅವರನ್ನು ಕೇಳಿದ್ರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಕಳೆದ ಕೇಲವು ವರ್ಷಗಳಿಂದ ಮೂರು ಸಾವಿರ ಮಠದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಈಗಿನ ಮೂಜಗು ಶ್ರೀಗಳು ನೊಂದಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ಇತ್ತಿಚಿಗೆ ಕೆಎಲ್ ಇ ಸಂಸ್ಥೆಗೆ ಆಸ್ತಿ ಪರಬಾರೆ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಮೂಜಗು ಶ್ರೀಗಳು ಮೂರುಸಾವಿರ ಮಠ ಬಿಟ್ಟು ಹಾನಗಲ್ ಕುಮಾರಸ್ವಾಮಿ ಮಠಕ್ಕೆ ತೆರಳಲು ನಿರ್ಧರಿಸಿದ್ದಾರೆನ್ನುವ ಸುದ್ದಿ ದಟ್ಟವಾಗಿ ಹಬ್ಬುತ್ತಿದೆ. ಈ ಹಿಂದೆಯು ಉತ್ತರಾಧಿಕಾರಿ ವಿವಾದಿಂದ ಮನನೊಂದು ಮಠ ತೊರೆದು ಹಾನಗಲ್ ಮಠಕ್ಕೆ ತೆರಳಿದ್ದರು.

ಈಗ ಮತ್ತೆ ಉತ್ತರಾಧಿಕಾರಿ ವಿವಾದಕ್ಕೆ ತೆರೆ ಎಳೆದು ಮಠ ತೊರೆಯಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ರುದ್ರಮುನಿ ಸ್ವಾಮಿಜಿಗಳು ಕಳೆದ ರಾತ್ರಿ ಮೂಜಗು ಶ್ರೀಗಳ ಜೊತೆಗೆ ಮಹತ್ವದ ಮಾತುಕತೆ ನಡೆಸಿದ್ದಾರೆನ್ನಲಾಗಿದೆ. ಇದೆ ವೇಳೆ ಮಠದ ಆಸ್ತಿ ಪರಬಾರೆ ವಿಚಾರವಾಗಿ ಉನ್ನತ ಸಮಿತಿ ಸದಸ್ಯ ಶಂಕರಣ್ಣ ಮುನವಳ್ಳಿ ದಿಂಗಾಲೇಶ್ವರ ಶ್ರೀ ಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯ ಮೂರು ಸಾವಿರ ಮಠದ ಸುತ್ತ ವಿವಾದದ ಹುತ್ತ ಬೆಟ್ಟದಂತೆ ಬೆಳೆಯುತ್ತಿದೆ. ಆಸ್ತಿ ವಿವಾದದ ಜೊತೆ ಜೊತೆಗೆ ಈಗ ಉತ್ತರಾಧಿಕಾರಿ ವಿವಾದವು ಮುನ್ನಲೆಗೆ ಬರುವ ಮೂಲಕ ಮಠದ ಆವರಣದಲ್ಲಿ ಮತ್ತೊಂದು ಸಂಘರ್ಷಕ್ಕೆ ವೇದಿಕೆ ಸಿದ್ದವಾಗುವ ಸಾಧ್ಯತೆ ದಟ್ಟವಾಗುತ್ತಿದೆ.

Tags:

error: Content is protected !!