ಮಹಿಳೆಯನ್ನು ಚುಡಾಯಿಸಿದ ಹಿನ್ನೆಲೆ ಯುವಕನೊರ್ವನಿಗೆ ಮರಕ್ಕೆ ಕಟ್ಟಿ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗೋಕಾಕ್ ತಾಲೂಕಿನ ಸಂಗನಕೇರಿ ಗ್ರಾಮದಲ್ಲಿ ನಡೆದಿದೆ.
ಹೌದು ಹೀಗೆ ಮಹಿಳೆಗೆ ಚುಡಾಯಿಸಿದ ಆರೋಪಕ್ಕೆ ರೊಚ್ಚಿಗೆದ್ದ ಸ್ಥಳೀಯರು ಈ ಯುವಕನನ್ನು ತೆಂಗಿನಮರಕ್ಕೆ ಕಟ್ಟಿ ಮನಬಂದಂತೆ ಗೂಸಾ ನೀಡಿದ್ದಾರೆ.
ಹೀಗೆ ಹಿಗ್ಗಾ ಮುಗ್ಗಾ ಬಡಿಸಿಕೊಳ್ಳುತ್ತಿರುವ ಈ ಯುವಕನ ಹೆಸರು ಹಣಮಂತ ಹಿರೇಮಠ ಅಂತಾ, ರಸ್ತೆಯಲ್ಲಿ ತೆರಳುತ್ತಿದ್ದ ಮಹಿಳೆಯನ್ನು ಚೂಡಾಯಿಸಿದ್ದಾನೆ ಎನ್ನಲಾಗುತ್ತಿದೆ. ಇದರಿಂದ ಅಲ್ಲಿಯೇ ಇದ್ದ ಗ್ರಾಮಸ್ಥರಿಗೆ ಆ ಮಹಿಳೆ ಹೇಳುತ್ತಿದ್ದಂತೆ ಆ ಯುವಕನನ್ನು ತೆಂಗಿನ ಮರಕ್ಕೆ ಕಟ್ಟಿ ಹಾಕಿ ಥಳಿಸಲಾಗಿದೆ. ಈ ವಿಡಿಯೋ ಸೊಶಿಯಲ್ ಮಿಡಿಯಾದಲ್ಲಿ ಫುಲ್ ವೈರಲ್ ಆಗಿದೆ.
ಒಟ್ಟಾರೆ ಈ ರೀತಿ ಮಹಿಳೆಗೆ ಚೂಡಾಯಿಸಲು ಹೋಗಿ ಈ ರೀತಿ ಬಿಸಿ ಬಿಸಿ ಕಜ್ಜಾಯ ಸ್ವೀಕರಿಸುವುದು ಈತನಿಗೆ ಯಾಕೆ ಬೇಕಿತ್ತೊ..? ಈ ಘಟನೆಯು ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.