ಮಕ್ಕಳು ರಾಜಕೀಯಕ್ಕೆ ಬಂದೇ ಬರ್ತಾರೆ. ಈಗಾಗಲೇ ಈ ಬಗ್ಗೆ ಹೇಳಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.
ಹರಿಹರದ ರಾಜನಹಳ್ಳಿಯಲ್ಲಿ ವಾಲ್ಮೀಕಿ ಗುರುಪೀಠದ ಜಾತ್ರೆಯಲ್ಲಿ ಮಕ್ಕಳೊಂದಿಗೆ ಪಾಲ್ಗೊಂಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿ, ಮಕ್ಕಳು ರಾಜಕೀಯ ಬಂದೇ ಬರ್ತಾರೆ. ಈಗಾಗಲೇ ಇದನ್ನು ನಾನು ಹೇಳಿದ್ದೇನೆ.
ಈ ಸಾಮ್ರಾಜ್ಯ ಕಟ್ಟಿದ್ದೇವೆ. ಅದನ್ನು ಮುಂದಕ್ಕೆ ಒಯ್ಯಲು ಮಕ್ಕಳು ಬೇಕೇಬೇಕಲ್ಲ ಎಂದರು.
ಮಕ್ಕಳು ಇನ್ನೂ ಶಿಕ್ಷಣ ಪಡೆಯುತ್ತಿದ್ದಾರೆ. ಈಗಲೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಶಿಕ್ಷಣ ಮುಗಿಸಿದ ನಂತರ ರಾಜಕೀಯಕ್ಕೆ ಬರುತ್ತಾರೆ ಎಂದು ಸ್ಪಷ್ಟೀಕರಣ ನೀಡಿದರು.