ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಕಣಬರ್ಗಿ ಕೆರೆ ಪ್ರದೇಶವನ್ನು ಶಾಸಕ ಅನಿಲ ಬೆನಕೆ ಲೋಕಾರ್ಪಣೆಗೊಳಿಸಿದರು.
ಬೆಳಗಾವಿ ಸ್ಮಾರ್ಟ್ ಆಗುತ್ತಿದೆ. ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಕಲ್ಪಿಸುವುದು ಮತ್ತು ನಗರದ ಅಭಿವೃದ್ಧಿ ಉದ್ದೇಶದಿಂದ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಅಧಿಕಾರಿಗಳು 5 ಕೋಟಿ ರೂ. ವೆಚ್ಚದಲ್ಲಿ ಕಣಬರ್ಗಿ ಕೆರೆ ಅಭಿವೃದ್ಧಿ ಯೋಜನೆಯನ್ನು ಪೂರ್ಣಗೊಳಿಸಿದ್ದಾರೆ. ವಾಕಿಂಗ್ ಟ್ರ್ಯಾಕ್, ಫುಡ್ ಕೋರ್ಟ್, ಮಕ್ಕಳ ಆಟೋಟಕ್ಕೆ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯಿಂದಲೂ ಸುಸಜ್ಜಿತವಾಗಿ ಕಣಬರ್ಗಿ ಕೆರೆ ಆವರಣ ಸಜ್ಜುಗೊಂಡಿದೆ. ಅಭಿವೃದ್ಧಿ ಹೊಂದಿದ ಕಣಬರ್ಗಿ ಕೆರೆ ಪ್ರದೇಶವನ್ನು ಶಾಸಕ ಅನಿಲ ಬೆನಕೆ ಮಂಗಳವಾರ ಲೋಕಾರ್ಪಣೆಗೊಳಿಸಿದರು.
ಈ ವೇಳೆ ಶಾಸಕ ಅನಿಲ ಬೆನಕೆ ಮಾತನಾಡಿ, ಸ್ಮಾರ್ಟ್ ಸಿಟಿ, ಪಾಲಿಕೆ ಮತ್ತು ಮುಖ್ಯವಾಗಿ ಕಣಬರ್ಗಿ ಜನತೆಯ ಸಹಕಾರದಿಂದ ಕಣಬರ್ಗಿ ಕೆರೆ ಅಭಿವೃದ್ಧಿಪಡಿಸಲಾಗಿದೆ. 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಣಬರ್ಗಿ ಕೆರೆ ಪ್ರವಾಸೋದ್ಯಮಕ್ಕೂ ಪೂರಕವಾಗಿ ನಳನಳಿಸುತ್ತಿದೆ. ಇಂತಹ ವಿನೂತನ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದಿಸುವುದಾಗಿ ತಿಳಿಸಿದರು. ಇದೇ ರೀತಿ ಬೆಳಗಾವಿಯ ಕೋಟೆ ಕೆರೆ ಪ್ರದೇಶವನ್ನೂ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಸ್ಮಾರ್ಟ್ ಸಿಟಿ ಎಂಡಿ ಶಶಿಧರ ಕುರೇರ್, ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್., ಉಪ ಆಯುಕ್ತ ಅಶೋಕ ತೇಲಿ, ಕಣಬರಗಿ ಗ್ರಾಮದ ಮುಖಂಡರು ಮತ್ತಿತರರು ಇದ್ದರು.