Raibag

112 ತುರ್ತು ಸಹಾಯವಾಣಿ ಕುರಿತು ರಾಯಬಾಗ ಸಿಪಿಐ ಕೆ.ಎಸ್.ಹಟ್ಟಿ ಜನಜಾಗೃತಿ

Share

ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಸಿಪಿಐ ಕೆ.ಎಸ್.ಹಟ್ಟಿ 112 ತುರ್ತು ಸಹಾಯವಾಣಿ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.

ಹಾರೂಗೇರಿ ಪುರಸಭೆ ಕಾರ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಡಿಎಸ್ ಎಸ್ ಸಂಘಟನೆಯ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಕುಂದುಕೊರತೆಗಳು ಹಾಗೂ 112 ವಾಹನದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಿಪಿಐ ಕೆ.ಎಸ್.ಹಟ್ಟಿ ಮಾತನಾಡಿ ನಿಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ಯಾವುದೇ ತರಹದ ಅನಾಹುತಗಳು ಮತ್ತು ಕಳ್ಳತನ ಸಂಭವಿಸಿದರೆ ತುರ್ತು ಸಹಾಯವಾಣಿ 112 ಈ ನಂಬರಿಗೆ ಕರೆ ಮಾಡಿದರೆ ಲೊಕೇಶನ್ ಜನರೇಟಾಗಿ ಅರ್ಧ ತಾಸಿನಲ್ಲಿ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಜರುಗಿಸುತ್ತಾರೆ ಆದ್ದರಿಂದ ನೊಂದವರಿಗೆ ತಕ್ಷಣ ಸ್ಪಂದನೆ ಮಾಡುವಲ್ಲಿ ಇದು ಸಾರ್ವಜನಿಕರಿಕೆ ತುಂಬಾ ಸಹಾಯವಾಗುವುದು ಎಂದು ಹೇಳಿದರು.

ನಂತರ ಹಾರೂಗೇರಿ ಪಿಎಸ್‍ಐ ಯಮನಪ್ಪ ಮಾಂಗ ಮಾತನಾಡಿ ಕಾನೂನು ಎಲ್ಲರಿಗೂ ಒಂದೇಯಾಗಿದ್ದು ಆದ್ದರಿಂದ ದುಶ್ಚಟಕ್ಕೆ ಬಲಿಯಾಗಿ ನಿಮ್ಮ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳದೇ ಸಂವಿಧಾನದ ಅಡಿಯಲ್ಲಿ ಎಲ್ಲರೂ ಬದುಕಬೇಕು. ನಿಮ್ಮನ್ನು ನಂಬಿದ ಕುಟುಂಬದವರನ್ನು ಅನಾಥರನ್ನಾಗಿ ಮಾಡಬಾರದು ಎಂಬ ಉದ್ದೇಶದಿಂದ ವಾಹನ ಚಲಾಯಿಸುವಾಗ ಡಿಎಲ್, ಇನ್ಸೂರೆನ್ಸ್ ಮತ್ತು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬಾಬು ನಡೋಣಿ, ಅಪ್ಪಾಸಾಬ ಸರಿಕರ, ಮಹಾದೇವ ನಡೋಣಿ, ಉಮೇಶ ಶಿಂಗೆ, ಸುಧೀರ ಶಿಂಗೆ, ಸದಾಶಿವ ಪೂಜೇರಿ, ಸುರೇಶ ಪೂಜೇರಿ, ಸಂದೀಪ ಗಡ್ಡಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!