Khanapur

ಪುನಃ ಮೊಳಗಿತು ಹಂಜಿ ಮನೆತನದ ವಿಜಯ ಕಹಳೆ

Share

ಖಾನಾಪುರ ತಾಲೂಕಿನ ಹಲಸಿ ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಹಂಜಿ ಪೆನಲ್‍ನ ಅಭ್ಯರ್ಥಿಗಳಾದ ಮುನೇರಾ ಮಹ್ಮದಗೌಸ್ ಸಂಗೊಳ್ಳಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಸಂತೋಷ ಹಂಜಿಯವರು ಆಯ್ಕೆಯಾಗಿದ್ದಾರೆ.

ಸಂತೋಷ ಚಂದ್ರಶೇಖರ ಹಂಜಿ ಎಂಬಿಎ ಪದವೀಧರರಾಗಿದ್ದು, ಈ ಹಿಂದೆಯೂ ಹಲಸಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ ಅದೇ ರೀತಿ ಅಧಿಕಾರದಲ್ಲಿದ್ದಾಗಲೂ, ಇರದೇ ಇರುವಾಗಲೂ ಸದಾ ತಮ್ಮ ಜೀವನವನ್ನು ಸಮಾಜ ಸೇವೆಗೆಂದು ಮುಡುಪಾಗಿಟ್ಟವರು ಸಂತೋಷ ಹಂಜಿ, ಹಾಗೆಯೇ ಶ್ರೀಕ್ಷೇತ್ರ ಹಲಸಿಯಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಬಹುಮುಖ್ಯ ಪಾತ್ರ ವಹಿಸಿದ್ದರು ಅದೇ ರೀತಿ ಐತಿಹಾಸಿಕ ಕದಂಬೋತ್ಸವಕ್ಕೆ ಮುಖ್ಯ ಕಾರಣೀಭೂತರಾಗಿ ಉತ್ಸವವನ್ನು ಯಶಸ್ವಿಗೊಳಿಸಿದ್ದಾರೆ.

ಒಟ್ಟಿನಲ್ಲಿ ಪಾರಂಪರಿಕವಾಗಿ ಹಂಜಿ ಮನೆತನವು ಪಂಚಾಯತಿಯ ಆಡಳಿತದಲ್ಲಿದ್ದು ಈ ಬಾರಿಯೂ ಪುನಃ ಸಾಬೀತಾಗಿದೆ.

Tags:

error: Content is protected !!