ಅದು ಹೇಳಿ ಕೇಳಿ ಭೀಮಾತೀರದ ಕ್ರೈಂ ಲೋಕಕ್ಕೆ ಹೆಸರುವಾಸಿಯಾದ ಜಿಲ್ಲೆ. ಹಾಡುಹಗಲೆ ಗುಂಡಿನ ದಾಳಿಗಳು ನಡೆದು ಬೆಚ್ಚಿ ಬಿಳಿಸುವ ಜಿಲ್ಲೆ ಎಂದೆ ಅಪಖ್ಯಾತಿ ಹೊಂದಿದೆ. ಆಗಾಗ ನಡೆಯೋ ದರೋಡೆ, ಕೊಲೆ ಪ್ರಕರಣಗಳು ಪೊಲಿಸರ ನಿದ್ದೆಗೆಡಿಸುತ್ತಿದ್ದವು. ಆದ್ರೆ ಇದೀಗ ಆ ಜಿಲ್ಲೆಯ ಪೊಲಿಸರು ಸ್ವಲ್ಪ ಮಟ್ಟಿಗೆ ನಿರಾಳ ರಾಗಿದ್ದಾರೆ. ಹಾಗಿದ್ದರೆ ಆ ಜಿಲ್ಲೆ:ಯಾವದು? ಪೊಲಿಸರು ಮಾಡಿದಾದ್ದರೂ ಏನು ಅನ್ನೊ ಕುರಿತು ಇಲ್ಲಿದೆ ಡಿಟೇಲ್ಸ್….
ಭೀಮಾತೀರದ ಕುಖ್ಯಾತಿಯನ್ನು ಹೊಂದಿದ ವಿಜಯಪುರ ಜಿಲ್ಲೆಯಲ್ಲಿ ಕ್ರೈಂ ರೇಟ್ ಸ್ವಲ್ಪ ಜಾಸ್ತಿನೆ ಎನ್ನಬಹುದು. ಈ ಜಿಲ್ಲೆಯಲ್ಲಿ ಯಾವ ಕ್ಷಣದಲ್ಲಿ ಯಾವ ಮೂಲೆಯಲ್ಲಿ ಕ್ರೈಮ್ ಸಂಭವಿಸುತ್ತೊ ಅನ್ನೊ ಆತಂಕದಲ್ಲೆ ವಿಜಯಪುರ ಪೊಲೀಸರು ಕಾರ್ಯ ನಿರ್ವಹಿಸಬೇಕಿತ್ತು. ಆದ್ರೆ ಇದೀಗ ವಿಜಯಪುರ ಜಿಲ್ಲಾ ಪೊಲೀಸ್ ವತಿಯಿಂದ “ ಒಂದೇ ದೇಶ(ಭಾರತ) ಒಂದೇ ತುರ್ತು ಕರೆ ಸಂಖ್ಯೆ 112 ತುರ್ತು ವಾಹನಗಳನ್ನು ಲೋಕಾರ್ಪಣೆ ಗೊಳಿಸಲಾಗಿದೆ.
ಒಂದೇ ದೇಶ ಒಂದೇ ತುರ್ತು ಕರೆ ಸಂಖ್ಯೆ 112 ತುರ್ತು ಸ್ಪಂದನಾ ಸಹಾಯ ವಾಣಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಕ್ರೈಮ್ ಗಳು ಸಂಭವಿಸಿದಾಗ ಸಾರ್ವಜನಿಕರು , ಮಹಿಳೆ ಯರು , ನೊಂದವರು , ಹಿರಿಯ ನಾಗರಿಕರು ತಮ್ಮ ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಸಹಾಯದ ಸದುಪಯೋಗ ಪಡೆಯ ಬಹುದಾಗಿದೆ.
ಇನ್ನೂ ಕರ್ತವ್ಯಕ್ಕೆ ಒಟ್ಟು 14 ತುರ್ತು ಸ್ಪಂದನಾ ವಾಹನಗಳನ್ನು ನಿಯೋಜಿಸ ಲಾಗಿದೆ , ಪ್ರತಿ ತುರ್ತು ಸ್ಪಂದನಾ ವಾಹನದಲ್ಲಿ 3 ಜನ ಅಧಿಕಾರಿ / ಪೊಲೀಸ್ ಸಿಬ್ಬಂದಿಯವರು ದಿನದ 24 × 7 ಕರ್ತವ್ಯ ನಿರತರಾಗಿರುತ್ತಾರೆ. ಜಿಲ್ಲೆಯಲ್ಲಿ 126 ಸಿಬ್ಬಂದಿಗೆ ಸಾರ್ವಜನಿಕ ರೊಂದಿಗೆ ವಿನಮ್ರವಾಗಿ ನಡೆದು ಕೊಳ್ಳುವಂತೆ ತರಬೇತಿ ಯನ್ನು ನೀಡಲಾಗಿದೆ. ಸಾರ್ವಜನಿಕರು ತುರ್ತು ಸೇವೆ ಸಂಬಂಧವಾಗಿ 112 ಸಂಖ್ಯೆ ಮುಖಾಂತರ ದೂರು ನೀಡಿದಾಗ ಬೆಂಗಳೂರಿ ನಲ್ಲಿರುವ ನಿಯಂತ್ರಣ ಕೊಠಡಿಯ ನಿರ್ವಹಣೆಯ ಸಿಬ್ಬಂದಿ ಕರೆ ಸ್ವೀಕರಿಸುತ್ತಾರೆ.
ಸಂಬಂಧಪಟ್ಟ ಜಿಲ್ಲೆಯ ನಿಯಂತ್ರಣ ಕೊಠಡಿಗೆ ರವಾನಿಸಿದಾಗ ಕರೆಯನ್ನು ತುರ್ತು ಸ್ಪಂದನಾ ವಾಹನಕ್ಕೆ ತಲುಪಿಸಿ ಸೇವೆಯು ಅಗತ್ಯವಿರುವ ಸ್ಥಳಕ್ಕೆ ವಾಹನಗಳನ್ನು ತೆರಳುವಂತೆ ಸೂಚಿಸಲಾಗುತ್ತದೆ. ಈ ವಾಹನಗಳಲ್ಲಿ ಎಂಡಿಟಿ ಮೊಬೈಲ್ ಡಾಟಾ ಟರ್ಮಿನಲ್ ತಂತ್ರಾಶ ಅಳವಡಿಸಲಾಗಿದೆ. ಅದರ ಜಿಪಿಎಸ್ ಸಹಾಯ ದಿಂದ ಅವಘಡ ಗೊಂಡ ಸ್ಥಳಕ್ಕೆ ತೆರಳಲು ಸಹಕಾರಿಯಾಗಿದೆ ಎಂದರು. ಸಾರ್ವಜನಿಕರು ತುರ್ತು ಸಂದರ್ಭದಲ್ಲಿ 112 ಕರೆ ಮಾಡಿ ಸಹಾಯ ಪಡೆದು ಕೊಳ್ಳಬಹುದಾಗಿದೆ.
ಇನ್ನೂ 112 ತ್ವರಿತ ವಾಹನಗಳನ್ನು ಲೋಕಾರ್ಪಣೆ ಮಾಡಿದ್ದು ವಿಜಯಪುರ ಜನತೆ ಖುಷ್ ಆಗಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಕ್ರೈಮ್ ರೇಟ್ ನ್ನು ಈ ವಾಹನಗಳು ಕಡಿಮೆ ಮಾಡಿ ಭದ್ರತಾ ಭಾವ ಮೂಡಿಸುತ್ತಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ರೈಮ್ ಗಳು ಸಂಭವಿಸಿದಾಗ ಹಾಗೂ ಮಹಿಳೆ ಯರು , ನೊಂದವರು , ಹಿರಿಯ ನಾಗರಿಕರು ತೊಂದರೆ ಯಲ್ಲಿದ್ದಾಗ ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಸಹಾಯದ ಸದುಪಯೋಗ ಪಡೆಯ ಬಹುದಾಗಿದ್ದು ಸಾರ್ವಜನಿಕರು ಹೆಚ್ಚಿನ ಲಾಭ ಪಡೆದುಕೊಳ್ಳಲು ಸಾರ್ವಜನಿಕರು ಹಾಗೂ ನೊಂದವರು ಮುಂದೆ ಬರಬೇಕು ಎನ್ನುತ್ತಾರೆ ಗುಮ್ಮಟನಗರಿ ಜನತೆ..
ಒಟ್ನಲ್ಲಿ 112 ವಾಹನಗಳು ಅಪರಾಧ ಕೃತ್ಯಗಳಿಂದ ಬೆಚ್ಚಿ ಬಿಳಿತಿದ್ದ ವಿಜಯಪುರ ಜಿಲ್ಲೆಯ ಜನತೆಗೆ ಭದ್ರತಾ ಭಾವ ಮೂಡಿಸಿವೆ.