ಹೌದು ಖಾನಾಪೂರ ತಾಲೂಕಿನ ಭೀಮಗಡ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಹೆಮ್ಮಡಗಾ ಗ್ರಾಮದ ಬಳಿ ಮೇಯಲು ಅರಣ್ಯಕ್ಕೆ ಹೋಗಿದ್ದ ಆಕಳುಗಳ ಗುಂಪಿನ ಮೇಲೆ ಹುಲಿ ದಾಳಿ ನಡೆಸಿದ ಕಾರಣ ಎರಡು ಆಕಳುಗಳಿಗೆ ಕೊಂದ್ದು,ಅವುಗಳ ಮೃತ ದೇಹವನ್ನು ಅರಣ್ಯದೊಳಗೆ ಎಳೆದುಕೊಂಡು ಹೋಗಿರುವ ಘಟನೆ ಎರಡು ದಿನಗಳ ಹಿಂದಷ್ಟೇ ನಡೆದಿತ್ತು.
ಈ ಪ್ರಕರಣ ಬೆಳಕಿಗೆ ಬಂದತ್ತೇ ಭೀಮಗಡ ವನ್ಯಧಾಮದ ಉಪವಲಯ ಅರಣ್ಯ ಅಧಿಕಾರಿಗಳು ಹೆಮ್ಮಡಗಾ ಗ್ರಾಮದ ರೈತ ಶ್ರೀಕಾಂತ್ ನಾರಾಯಣ ಮಾದಾರ ಭೇಟಿನೀಡಿ ಆತನ ಆಕಳುಗಳ ಬಗ್ಗೆ ಪಂಚನಾಮೆ ಮಾಡಿರುವುದು ತಿಳಿದು ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ಸುರೇಶ್ ದೇಸಾಯಿ ಅವರು ಹೆಮ್ಮಡಗಾ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.
ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ಸುರೇಶ್ ದೇಸಾಯಿ ಮಾತನಾಡಿ ಭೀಮಗಡ ವನ್ಯಧಾಮದ ಪ್ರದೇಶದಲ್ಲಿ ಅದರಂತೆ ಇನ್ನೀತರ ಕಡೆಗಳಲ್ಲಿ ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಲೇ ಇವೆ ಇದರ ಬಗ್ಗೆ ಅರಣ್ಯ ಸಚಿವರಿಗೆ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಿಕೋಳ್ಳಲು ಕೋರುವುದಾಗಿ ತಿಳಿಸಿದರು.
ವನ್ಯಜೀವಿಗಳ ದಾಳಿಗೆ ನಿರಂತರ ನಡೆದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯಲ್ಲೂ ಇದರ ಬಗ್ಗೆ ಹೆಚ್ಚಿನ ಚರ್ಚೆ ಜರುಗಿಸುವುದಾಗಿ ತಿಳಿಸಿದರು.