ಹುಕ್ಕೇರಿ ತಾಲೂಕಿನ ಸೋಲಾಪುರ ಗ್ರಾಮ ಪಂಚಾಯತಿ ಅದ್ಯಕ್ಷ ,ಉಪಾದ್ಯಕ್ಷ ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಅದ್ಯಕ್ಷ ಸ್ಥಾನಕ್ಕೆ ಮಹಾದೇವ ಕ್ಷೀರಸಾಗರ ಮತ್ತು ಉಪಾದ್ಯಕ್ಷ ಸ್ಥಾನಕ್ಕೆ ಶ್ರೀಮತಿ ಗಂಗವ್ವಾ ಕಾಂಬಳೆ ಇಬ್ಬರೆ ನಾಮ ಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಭೀಮಪ್ಪಾ ಲಾಳೆ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರದೀಪ ನೆರ್ಲೆಕರ ನೂತನ ಅದ್ಯಕ್ಷ ಉಪಾದ್ಯಕ್ಷೆ ಯರನ್ನು ಸ್ವಾಗತಿಸಿ ಸನ್ಮಾನಿಸಿದರು.
ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಭಿಮಪ್ಪಾ ಲಾಳೆ ನೂತನ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಸಸಿ ನೀಡಿ ಐದು ವರ್ಷಗಳ ತಮ್ನ ಅಧಿಕಾರ ಅವಧಿಯಲ್ಲಿ ಗ್ರಾಮ ಮತ್ತು ಈ ಸಸಿಗಳನ್ನು ಅಭಿವೃದ್ಧಿ ಪಡಿಸಲು ವಿನಂತಿಸಿದರು.
ನಂತರ ಗ್ರಾಮದ ಹಿರುಯರಾದ ಶಶಿರಾಜ ಪಾಟೀಲ ನೂತನ ಅದ್ಯಕ್ಷ ಉಪಾದ್ಯಕ್ಷ ರಿಗೆ ಅಭಿನಂದಿಸಿ ಮಾತನಾಡಿ ಸಚಿವ ಉಮೇಶ ಕತ್ತಿ ಮತ್ತು ಬಿ ಡಿ ಸಿ ಸಿ ಬ್ಯಾಂಕ ಅದ್ಯಕ್ಷ ರಮೇಶ್ ಕತ್ತಿ ನೇತೃತ್ವದಲ್ಲಿ ಇಂದು ಸೋಲಾಪುರ ಗ್ರಾಮ ಪಂಚಾಯತಿ ಸಂಪೂರ್ಣ ಭಾರತೀಯ ಜನತಾ ಪಕ್ಷದ ತೆಕ್ಕೆಗೆ ಬಂದಿದೆ, ಮುಂಬರುವ ದಿನಗಳಲ್ಲಿ ಗ್ರಾಮ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಪ್ರಯತ್ನಿಸಬೇಕು ಎಂದರು ,
ಗ್ರಾಮಸ್ಥರು ಸಿಹಿ ಹಂಚಿ ಭಾರತೀಯ ಜನತಾ ಪಕ್ಷದ ಪರ ಮತ್ತು ಕತ್ತಿ ಸಹೋದರರ ಪರ ಘೋಷನೆ ಕೂಗಿ ವಿಜಯೋತ್ಸವದ ಆಚರಿಸಿದರು.
ಮತ್ತೋರ್ವ ಮುಖಂಡ ಮಾತನಾಡಿ ಶಶಿರಾಜ ಪಾಟೀಲರು ಗ್ರಾಮದ ಹಿತದೃಷ್ಟಿಯಿಂದ ಅವಿರೋಧ ಮಾಡಲು ತಿರ್ಮಾನಿಸಿ ಸತತ ಪ್ರಯತ್ನದಿಂದ ಅವಿರೋಧ ಮಾಡಲು ಸಹಕರಿಸಿದರು ಎಂದರು,
ನೂತನ ಅದ್ಯಕ್ಷ ಮಹಾದೇವ ಕ್ಷೀರಸಾಗರ ಮತ್ತು ಉಪಾದ್ಯಕ್ಷೆ ಶ್ರೀಮತಿ ಗಂಗವ್ವಾ ಕಾಂಬಳೆ ಮಾತನಾಡಿ ಸೋಲಾಪುರ ಗ್ರಾಮದ ಮುಖಂಡರ ಮಾರ್ಗದರ್ಶನದಲ್ಲಿ ಮತ್ತು ಸದಸ್ಯರ ಸಹಕಾರದೊಂದಿಗೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ನಾವು ಶ್ರಮಿಸುವದಾಗಿ ಹೇಳಿದರು ,
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಶಿರಾಜ ಪಾಟೀಲ, ರಾಜು ಕೋರೆ, ಅನೀಲ ಖನಾಯಿ, ಕುಮಾರ ಶಿಂಧೆ, ಅಣ್ಣಾಜೆ ಹೋಸೂರೆ, ಮಹೇಶ ಜಾಧವ, ಆನಂದ ಬಾಗಿ, ಅಶೋಕ ಮಸ್ತಿ ಮೊದಲಾದವರು ಉಪಸ್ಥಿತರಿದ್ದರು.
ನಂತರ ನೂತನ ಸದಸ್ಯರು ಗ್ರಾಮದ ದೇವಸ್ಥಾನ ಗಳಿಗೆ ಭೇಟಿ ನೀಡಿ ವಿಷೇಶ ಪೂಜೆ ಸಲ್ಲಿಸಿದರು.