Hukkeri

ಹುಕ್ಕೇರಿ: ಮೃತ್ಯುಂಜಯ ಸ್ವಾಮಿಗಳು ಮಾತನಾಡುವ ಸಂದರ್ಭದಲ್ಲಿ ಮನಸ್ಥಿತಿ ಬೇರೆ ಇರಬಹುದು – ರಮೇಶ ಕತ್ತಿ

Share

ಹುಕ್ಕೇರಿ ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಂಸದ ಮತ್ತು ಬೆಳಗಾವಿ ಜಿಲ್ಲಾ ಮದ್ಯವರ್ತಿ ಬ್ಯಾಂಕಿನ ಅದ್ಯಕ್ಷ ರಮೇಶ ಕತ್ತಿ ಮಾತನಾಡಿ ಕೂಡಲ ಸಂಗಮದ ಮೃತ್ಯುಂಜಯ ಸ್ವಾಮಿಗಳು ಬಿ ಎಸ್  ಯಡಿಯೂರಪ್ಪ ನವರ ಬುದ್ದಿ ಸ್ಥಿಮಿತದಲ್ಲಿ ಇಲ್ಲ ವಯಸ್ಸಾಗಿದೆ,ಅವರನ್ನು ಸಿ ಎಂ ಸ್ಥಾನದಿಂದ ಕೆಳಗಿಳಿಸಿ ಬೇರೆ ಲಿಂಗಾಯತರನ್ನು ಕೂರಿಸಬೇಕು ಎಂದು ಭಾಷಣ ಮಾಡುವಾಗ ಶ್ರೀ ಗಳ ಮನಸ್ಥಿತಿ ಬೇರೆ ಇರಬಹುದು,

ಅದಕ್ಕೆ ಮಹತ್ವ ಕೊಡುವದು ಬೇಡ ಇನ್ನೂ ಎರಡು ವರ್ಷ ಬಿ ಎಸ್ ಯಡಿಯೂರಪ್ಪ ನವರೆ ರಾಜ್ಯದ ಮುಖ್ಯಮಂತ್ರಿ ಗಳಾಗಿ ಮುಂದುವರೆಯುತ್ತಾರೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೇಳಗಿಳಿಸುವ ಕಾರ್ಯ ಜನರು ಮಾಡಬೇಕೆ ವಿನ:ಹ ಸ್ವಾಮಿಗಳಲ್ಲಾ ಎಂದರು

ಕೂಡಲ ಸಂಗಮದ ಮೃತ್ಯುಂಜಯ ಸ್ವಾಮೀಜಿಗಳು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ಯಡಿಯೂರಪ್ಪ ನವರು ನಿನ್ನೆ ಸರ್ಕಾರದ ನಿಯೋಗ ಕಳುಹಿಸಿ ಭರವಸೆ ನೀಡಿದರು. ಇಂದು ವಿಧಾನಸಭೆಯಲ್ಲಿ ಮೀಸಲಾತಿ ಬಗ್ಗೆ ಕೇಂದ್ರದತ್ತ ಬೆರಳು ತೋರುತ್ತಿದ್ದಾರೆ. ಹೀಗಾಗಿ ಬಿಎಸ್ ವೈ ಅವರಿಗೆ ಬುದ್ಧಿ ಸ್ಥಿಮಿತದಲ್ಲಿಲ್ಲ, ವಯಸ್ಸಾಗಿದೆ. ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಬೇರೆ ಲಿಂಗಾಯಿತರನ್ನು ಕೂರಿಸಬೇಕು ಎಂದು ಹೇಳಿಕೆ ನೀಡಿದ್ದರ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಾಜಿ ಸಂಸದ ರಮೇಶ ಕತ್ತಿ ಈ ರೀತಿ ಸಮಜಾಯಿಸಿ ಹೇಳಿಕೆ ನೀಡಿದರು.

Tags:

error: Content is protected !!