Hukkeri

ಹುಕ್ಕೇರಿ : ಮುಂಬೈ  ನಗರವನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷನೆ ಮಾಡಿ – ರಮೇಶ ಕತ್ತಿ

Share

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಮೇಲಿಂದ ಮೇಲೆ ಗಡಿ ಸಮಸ್ಯೆಯನ್ನು ಮುಂದೆ ಮಾಡಿ ರಾಜಕಾರಣ ಮಾಡುತ್ತಿರುವದು ಸರಿಯಲ್ಲಾ, ಪ್ರಥಮ ಬಾರಿಗೆ ಶಾಸಕರಾಗಿ ಮುಖ್ಯಮಂತ್ರಿ ಗಳಾಗಿದ್ದಾರೆ ಮೋದಲು ತಮ್ಮ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು ಅದನ್ನು ಬೀಟ್ಟು ಬೆಳಗಾವಿ,ಕಾರವಾರ,ನಿಪ್ಪಾಣಿ ನಮ್ಮದು ಎಂದು ಹೇಳುತ್ತಾ ಕಾಲಹರಣ ಮಾಡಿ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನ ಬಿಟ್ಟು ಗಡಿ ಪ್ರದೇಶದಲ್ಲಿ ವಾಸಿಸುವ ಮಹಾರಾಷ್ಟ್ರದ ಜನತೆಯ ಮೂಲಭೂತ ಸಮಸ್ಯೆಗಳ ಬಗ್ಗೆ ಗಮನ ಹರಿಸುವದು ಅವಶ್ಯವಾಗಿದೆ.

ಆನೆ ಹೋಗುವಾಗ ಶ್ವಾನ ಬೋಗಳುವಂತೆ ಮೇಲಿಂದ ಮೇಲೆ ಗಡಿ ಬಗ್ಗೆ ಹೇಳಿಕೆ ನೀಡಿ ಎಂ ಈ ಎಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ, ನಂಜುಡಪ್ಪ ವರದಿಯೇ ಅಂತಿಮ .
ಇದೆ ರೀತಿ ಠಾಕ್ರೆ ತನ್ನ ಚಾಳಿಯನ್ನು ಮುಂದುವರೆಸಿದರೆ ಅತ್ತ ಆಂದ್ರಪ್ರದೇಶ ಇತ್ತ ಮುಂಬಯಿ ಕರ್ನಾಟಕ ಭಾಗಗಳನ್ನು ಕರ್ನಾಟಕ ವಶಪಡಿಸಿಕೊಂಡು ಮಹಾರಾಷ್ಟ್ರ ರಾಜ್ಯದ ಭೂಪಟವನ್ನೆ ಬದಲಾಯಿಸಬೇಕಾದಿತು ಎಚ್ಚರಿಕೆ ಅಲ್ಲಿಯ ಹಿರಿಯ ರಾಜಕಾರಣಿ ಶರದ ಪವಾರ ಸಹ ಉದ್ದವ ಠಾಕ್ರೇಗೆ ಬುದ್ದಿ ಹೇಳಬೇಕು.

ಮುಂಬಯಿ ಕೈಗಾರಿಕೆಯ ಅತಿ ದೊಡ್ಡ ನಗರ ಇರುವದರಿಂದ ಎಲ್ಲಾ ರಾಜ್ಯದ ಕಾರ್ಮಿಕರು ಉದ್ಯೋಗ ಅರಸಿ ಮುಂಬೈಯಲ್ಲಿ ಕೇಲಸ ಮಾಡುತ್ತಿದ್ದಾರೆ ಕಾರಣ ಕೇಂದ್ರ ಸರ್ಕಾರ ಮುಂಬಯಿ ನಗರವನ್ನು ಕೇಂದ್ರಾಡಳಿತ ಪ್ರದೇಶ ವೆಂದು ಘೋಷಣೆ ಮಾಡುವ ಮುಖಾಂತರ ದೇಶದ ಕೀರಿಟವಾದ ಮುಂಬಯಿ ನಗರಕ್ಕೆ ವಿಶೇಷ ಸ್ಥಾನ ಮಾನ ನೀಡುವದು ಅವಶ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

Tags:

error: Content is protected !!