Hukkeri

ಹುಕ್ಕೇರಿ – ಮದಿಹಳ್ಳಿಯ ಶ್ರೀ ಸದ್ಗುರು ಸಮರ್ಥ ಗೀರಿಮಲ್ಲೇಶ್ವರ 31 ನೇ ಸಪ್ತಾಹ ಸಮಾಪ್ತಿ

Share

ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದ ಸದ್ಗುರು ಸಮರ್ಥ ಗೀರಿಮಲ್ಲೇಶ್ವರ ಆಶ್ರಮ ಇಷ್ಟಾರ್ಥ ದಯಪಾಲಿಸುವ ಕಾಮದೇನುವಾಗಿದೆ ಎಂದು ಮಾರುತಿ ಪಾಂಡ್ರೆ ಶರಣರು ಅಭಿಪ್ರಾಯ ಪಟ್ಟರು.ಅವರು ಇಂದು ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದ ಶ್ರೀ ಗೀರಿಮಲ್ಲೇಶ್ವರ ಆಶ್ರಮದಲ್ಲಿ ಸದ್ಗುರು ಮಹಾರಾಜರ 31 ನೇ ಸಪ್ತಾಹ ಕಾರ್ಯಕ್ರಮದಲ್ಲಿ ಹೇಳಿದರು.


ಶಿರಢಾಣದ ಕಲ್ಯಾಣೇಶ್ವರ ಮಹಾರಜರ ದಿವ್ಯ ಸಾನಿಧ್ಯದಲ್ಲಿ ಹಿಪ್ಪರಗಿಯ ಪ್ರಭು ಬೆನ್ನಳ್ಳಿ ಮಹಾರಾಜರು ಮತ್ತು ಖಾಜಿ ಬಿಳಗಿಯ ಚಿನ್ಮಾನಂದ ಸ್ವಾಮಿಗಳ ನೇತೃತ್ವದಲ್ಲಿ ಜರುಗಿದ ಸಪ್ತಾಹ ಮಂಗಲೋತ್ಸವ ಕಾರ್ಯಕ್ರಮ ದಲ್ಲಿ ಬೆಳವಿ ಸಿಧ್ದಾರೂಡ ಮಠದ ಮೃತ್ಯುಂಜಯ ಸ್ವಾಮಿ ಗಳು ಹಾಗೂ ಕ್ಯಾರಗುಡ್ಡದ ಅಭಿನವ ನಂಜುನಾಥ ಸ್ವಾಮಿಗಳು ಪ್ರವಚನ ನೀಡಿದರು.
ಪುಷ್ಯ ಮಾಸದ ಕೃಷ್ಣ ಪಕ್ಷ ಚಥುರ್ತಿ ,ಪಂಚಮಿ ಷಷ್ಟಿಯ ಮೂರು ದಿನಗಳ ಕಾಲ ನಡೆಯುತ್ತಿರುವ ಸಪ್ತಾಹ ಕಾರ್ಯಕ್ರಮದಲ್ಲಿ ಪ್ರತಿ ದಿನ ಕಾಕಡಾರತಿ, ಭಾರಾಅಭಂಗ, ಪುರಾಣ ಪ್ರವಚನ, ಭಜನೆ ಹಾಗೂ ಔಜೀಕರ ಮಹಾರಾಜರ ಭಾವ ಚಿತ್ರ ಮೇರವಣೆಗೆ ಜರುಗಿದವು.
ಕೋನೆಯ ದಿನ ಸಕಲ ಸಾಧು ಸಂತರ ಸಾನಿದ್ಯದಲ್ಲಿ ವಿಮಲ ಬ್ರಹ್ಮ ನಿರೂಪನೆ ಹಾಗೂ ಪುಷ್ಪವೃಷ್ಟಿಯೊಂದಿಗೆ ಸಪ್ತಾಹವು ಮಂಗಲವಾಯಿತು.
ಇನ್ ನ್ಯೂಜ ಜೊತೆ ಮಾತನಾಡಿದ ಮಾರುತಿ ಪಾಂಡ್ರೆ ಶರಣರು ಮದಿಹಳ್ಳಿ ಗ್ರಾಮಸ್ಥರ ಸಹಕಾರದಿಂದ ಕಳೆದ ಮೂವತ್ತ ಒಂದು ವರ್ಷಗಳಿಂದ ಪ್ರತಿ ವರ್ಷ ಆಚರಿಸುತ್ತಿರುವ ಸಪ್ತಾಹ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಗುತ್ತಿದೆ, ಈ ಆಶ್ರಮಕ್ಕೆ ಬಂದು ಹರಕೆ ಹೋತ್ತ ಭಕ್ತರಿಗೆ ಫಲ ನಿಶ್ಚಿತವಾಗಿ ಸಿಗುತ್ತದೆ ಹಾಗೂ ಇಲ್ಲಿ ಬರುವ ನೂರಾರು ಯುವಕರು ಕುಡಿತ ಮತ್ತು ದುಶ್ಚಟಗಳಿಂದ ಮುಕ್ತಿ ಪಡೆದಿದ್ದಾರೆ ಇದರಿಂದಾಗಿ ಪ್ರತಿ ವರ್ಷ ಭಕ್ತರ ಸಂಖ್ಯೆ ಹೇಚ್ಚಾಗುತ್ತಿದೆ ಎಂದರು .
ಕ್ಯಾರಗುಡ್ಡದ ಅಭಿನವ ಮಂಜುನಾಥ ದೇವರು ಮಾತನಾಡಿ ಪ್ರತಿ ವರ್ಷ ಔಜೀಕರ ಮಹಾರಾಜರ ಭಾವ ಚಿತ್ರ ಮೇರವಣೆಗೆಯು ಸಾವಿರಾರು ಭಕ್ತ ಸಮೂಹ ಮದ್ಯೆ ದಿಂಡಿ ಪಲ್ಲಕ್ಕಿ ಉತ್ಸವ ಜರುಗುತ್ತದೆ, ಬರುವ ಭಕ್ತರಿಗೆ ಇಷ್ಟಾರ್ಥ ಸಿದ್ದಿ ಮಾಡುವ ಕಲ್ಪವೃಕ್ಷ ಈ ಮದಿಹಳ್ಳಿ ಗಿರಿಮಲ್ಲೇಶ್ವರ ಆಶ್ರಮವಾಗಿದೆ ಎಂದರು.

ಈ ಸಂದರ್ಭದಲ್ಲಿ ಆಶ್ರಮದ ಪರಮ ಭಕ್ತರಾದ ಪ್ರಕಾಶ ಪಾಂಡ್ರೆ, ಲಕ್ಷ್ಮಣ ಕಾಂಬಳೆ, ತುಕಾರಾಮ ಪಾಂಡ್ರೆ, ನ್ಯಾಯವಾದಿ ಕೆ ಬಿ ಕುರಬೇಟ, ಭಾಹುಸಾಹೇಬ ಪಾಂಡ್ರೆ, ಶ್ರವಣ ಪಾಂಡ್ರೆ, ಮದಿಹಳ್ಳಿ ಗ್ರಾಮಸ್ಥರು , ಮಹಿಳೆಯರು ಹೇಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಹಾಪ್ರಸಾದ ಸವಿದರು.

Tags:

error: Content is protected !!