Hukkeri

ಹುಕ್ಕೇರಿ ನಗರದಲ್ಲಿ ಅಲಂಕೃತ ಬೀದಿ ದೀಪ ಅಳವಡಿಕೆಗೆ ಚಾಲನೆ ನೀಡಿದ ಸಚಿವ ಉಮೇಶ ಕತ್ತಿ

Share

ಹುಕ್ಕೇರಿ ನಗರದಲ್ಲಿ ಅಲಂಕೃತ ಬೀದಿ ದೀಪಗಳನ್ನು ಸ್ಥಾಪಿಸಲು ಆಹಾರ ಮತ್ತು ನಾಗರಿಕ ಸೌಲಭ್ಯ ಸಚಿವ ಉಮೇಶ ಕತ್ತಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಪಟ್ಟಣದ ಕೋರ್ಟ ಸರ್ಕಲ್ ದಿಂದ ಸುಮಾರು ಎರಡೂವರೆ ಕೀಲೋ ಮೀಟರ್ ವರಗೆ ರಸ್ತೆ ಎರಡು ಬಾಜು ಅಲಂಕೃತ ಬೀದಿ ದೀಪ ಅಳವಡಿಕೆಗೆ ಚಾಲನಾ ನೀಡಿ ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವ ಉಮೇಶ ಕತ್ತಿ ಹುಕ್ಕೇರಿ ನಗರ ಸೌಂದರ್ಯ ಕರಣ ಮಾಡಲು ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಬೀದಿ ದೀಪ ಅಳವಡಿಕೆ ಮಾಡಲಾಗಿದೆ ಮುಂಬರವ ದಿನಗಳಲ್ಲಿ ಸರ್ಕಲ್ ದಿಂದ ಉಮೇಶ ನಗರ ಹಾಗೂ ಎಲಿಮುನ್ನೋಳಿ ರಸ್ತೆವರಗೆ ಅಲಂಕೃತ ಬೀದಿ ದೀಪಗಳನ್ನು ಅಳವಡಿಸಲಾಗುವದು, ಸಾರ್ವಜನಿಕರು ನಗರ ಸೌಂದರ್ಯಿಕರಣ ಮಾಡುವುದಕ್ಕೆ ಸಹಕರಿಸಬೇಕು ಮತ್ತು ಬೀದಿ ವ್ಯಾಪಾರಸ್ಥರು ಪುಟ್ ಪಾತ್ ಅತಿಕ್ರಮಣ ಮಾಡಿ ವ್ಯಾಪಾರ ಮಾಡುವದರಿಂದ ಜನದಟ್ಟಣೆ ಹೇಚ್ಚಾಗಿ ರಸ್ತೆ ಸಂಚಾರಕ್ಕೆ ತೊಂದರೆ ಯಾಗುತ್ತಿದ್ದು ಕಾರಣ ಪುಟ್ ಪಾತ್ ಮೇಲೆ ವ್ಯಾಪಾರ ವಹಿವಾಟು ಮಾಡಬಾರದು ಎಂದು ಸಾರ್ವಜನಿಕ ವಿನಂತಿಸಿದರು.

ವಿದ್ಯುತ್ ಗುತ್ತಿಗೆದಾರ ಆಯ್ ಎಸ್ ಪಾಟೀಲ ಸಚೀವರನ್ನು ಸ್ವಾಗತಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬಿ ಜೆ ಪಿ ಮುಖಂಡರಾದ ಪರಗೌಡಾ ಪಾಟೀಲ, ಜಯಗೌಡಾ ಪಾಟೀಲ, ಬೆಳಗಾವಿ ಲೋಕೋಪಯೋಗಿ ವಿದ್ಯುತ್ ಉಪ ವಿಭಾಗ ಅಭಿಯಂತರ ಪ್ರದೀಪ ಸಾವಂತ, ಹುಕ್ಕೇರಿ ಲೋಕೋಪಯೋಗಿ ಅಭಿಯಂತರ ಎಸ್ ಕೆ ಹುಕ್ಕೇರಿ, ಪ್ರಭಾಕರ ಕಾಮತ್, ಪುರಸಭೆ ಅದ್ಯಕ್ಷ ಎ ಕೆ ಪಾಟೀಲ, ಉಪಾದ್ಯಕ್ಷ ಆನಂದ ಗಂಧ, ಸದಸ್ಯರಾದ ರಾಜು ಮುನ್ನೋಳ್ಳಿ,ರೇಖಾ ಚಿಕ್ಕೋಡಿ, ಫರಿದಾ ಮುಲ್ಲಾ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!