ಹುಕ್ಕೇರಿ ತಾಲೂಕಿನ ಸುಲ್ತಾನಪೂರ ಗ್ರಾಮ ಪಂಚಾಯತಿ ಇತಿಹಾಸದಲ್ಲೆ ಮೊದಲಬಾರಿಗೆ ಅದ್ಯಕ್ಷ ಉಪಾದ್ಯಕ್ಷ ಸ್ಥಾನಗಳು ಅವಿರೋಧ ಆಯ್ಕೆ ಯಾಗುವ ಮೂಲಕ ಹೋಸ ಇತಿಹಾಸಕ್ಕೆ ನಾಂದಿ ಹಾಡಿದೆ.

ಕಳೆದ ತಿಂಗಳು ಸುಲ್ತಾನಪೂರ ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶ ಬಂದ ಮೇಲೆ ಒಂದೆ ಕೋಮಿಗೆ ಸೇರಿದ ಜನ ಮನೆ ಮುಂದೆ ಪಟಾಕಿ ಸಿಡಿಸಿದರ ಹಿನ್ನಲೆಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಸಾವಿನಲ್ಲಿ ಅಂತ್ಯವಾಗಿದ್ದನ್ನು ನಾವು ಇಲ್ಲಿ ಗಮನಿಸಬಹುದು, ಗ್ರಾಮದ ಹಿರಿಯರು ಇಂದು ನಡೆದ ಅದ್ಯಕ್ಷ ಉಪಾದ್ಯಕ್ಷೆ ಸ್ಥಾನಕ್ಕೆ ಚುನಾವಣೆ ನಡೆಸದೆ ಅವಿರೋಧ ಆಯ್ಕೆಗೆ ಶ್ರಮಿಸಿದ್ದಾರೆ.
ಅದ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಶ್ರೀಮತಿ ಶೀಲಾ ಪಾಟೀಲ ನಾಮಪತ್ರ ಸಲ್ಲಿಸಿದರು ಉಪಾದ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಿಸಲಾತಿ ಅನ್ವಯ ಶ್ರೀಮತಿ ಸಹದೇವಿ ತಳವಾರ ನಾಮಪತ್ರ ಸಲ್ಲಿಸಿದರು.
ಎರಡೂ ಸ್ಥಾನಕ್ಕೆ ಒಬ್ಬೋಬ್ಬರೆ ನಾಮ ಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಉಮೇಶ ಸಿದ್ನಾಳ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ನಂತರ ನೂತನ ಸದಸ್ಯರಿಗೆ ಗ್ರಾಮದ ಮುಖಂಡರು ಸತ್ಕರಿಸಿ ಅಭಿನಂದಿಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಅದ್ಯಕ್ಷೆ ಶೀಲಾ ಪಾಟೀಲ ಮತ್ತು ಉಪಾದ್ಯಕ್ಷೆ ಸಹದೇವಿ ತಳವಾರ ಗ್ರಾಮದ ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರ ಮತ್ತು ಗ್ರಾಮಗಳ ಮುಖಂಡರ ಮಾರ್ಗದರ್ಶನದಲ್ಲಿ ಆಡಳಿತ ನಡೆಸಲಾಗುವದು ಎಂದರು ( )
ಗ್ರಾಮದ ಮುಖಂಡ ನ್ಯಾಯವಾದಿ ನಿರ್ವಾಣಿ ದೇಮನ್ನವರ ಮಾತನಾಡಿ ಕಳೆದ 25 ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸುಲ್ತಾನಪೂರ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾದ್ಯಕ್ಷ ಸ್ಥಾನಗಳು ಅವಿರೋಧ ವಾಗುವ ಮೂಲಕ ಇತಿಹಾಸ ಸೃಷ್ಟಿಸಿದೆ ಇದಕ್ಕೆ ಗ್ರಾಮದ ಮುಖಂಡರು ಮತ್ತು ಸದಸ್ಯರ ಸಹಕಾರದಿಂದ ಪ್ರಥಮ ಬಾರಿಗೆ ಅವಿರೋಧ ಆಯ್ಕೆ ಜರುಗಿದೆ ಮುಂಬರುವ ದಿನಗಳಲ್ಲಿ ಗ್ರಾಕ ಅಭಿವೃದ್ಧಿಗೆ ಒತ್ತು ನೀಡಲಾಗುವದು ಎಂದರು,
ಈ ಸಂದರ್ಭದಲ್ಲಿ ಮುಖಂಡರಾದ ಮಹಾದೇವ ಪಾಟೀಲ, ಹಿರಾ ಶುಗರ ನಿರ್ದೆಶಕ ಬಸವರಾಜ ಕಲ್ಲಟ್ಟಿ, ಬಸವಂತ ರೇಡ್ಡಿ, ಬಸಲಿಂಗ ಕರಗುಪ್ಪಿ, ಗುರಪ್ಪಾ ತಳವಾರ, ಬಾಬು ಮುಲ್ತಾನಿ, ಬಸು ಪಾಟೀಲ, ಗೋಪಾಲ ತಳವಾರ, ಬಾಳು ಓಂಕಾರ, ಚಿದಾನಂದ ಗುಡಸಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹಾದೇವ ಜಿನರಾಳೆ ನೂತನ ಸದಸ್ಯರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಯಾವದೇ ಅಹಿತಕರ ಘಟನೆ ಜರುಗದಂತೆ ಹುಕ್ಕೇರಿ ಪಿ ಎಸ್ ಆಯ್ ಸಿದ್ರಾಮ ಉನ್ನದ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ ನಿಯೋಜಿಸಿದ್ದರು.