ಹಲಗಾ-ಮಚ್ಛೆ ಬೈಪಾಸ್ ವಿರೋಧಿಸಿ ರೈತರ ಹೋರಾಟ ತೀವ್ರಗತಿಯಲ್ಲಿ ಸಾಗುತ್ತಿದೆ. ಅಜ್ಜಿಯೊಬ್ಬರು ನಮ್ಮ ಜೀವ ತಗೊಂಡು ಅವ್ರು ರೋಡ್ ಮಾಡಲಿ ಎಂದು ಕಣ್ಣೀರು ಹಾಕಿದ್ದಾರೆ.ಹೌದು ಹಲಗಾ-ಮಚ್ಛೆ ಬೈಪಾಸ್ ನಿರ್ಮಾಣ ಸಂಬಂಧ ಮಂಗಳವಾರ ಕೆಲಸ ಆರಂಭಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರು, ಜೆಸಿಬಿ ಸಮೇತ ಆಗಮಿಸಿದ್ದರು.

ಈ ವೇಳೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಸುಮಿತ್ರಾ ಬಸವಂತ ಆನಗೋಳ್ಕರ್ ಎಂಬ ಅಜ್ಜಿಯೊಬ್ಬರು ಕಣ್ಣೀರು ಹಾಕಿದ ಹೃದಯವಿದ್ರಾವಕ ಘಟನೆ ಕಂಡು ಬಂತು. ರೋಡ್ ಮಾಡಿದ್ರೆ ನಮ್ಮ ಜೀವ ಕೊಡೋದು, ನಮ್ಮ ಜೀವ ತಗೋಲಿ ಅವ್ರು, ಅವ್ರ ತಗೋಬೇಕು. ರೋಡ್ ಮಾಡಿದ ಬಳಿಕ ಅವ್ರು ಓಡಾಡಲಿ, ನಮ್ಮ ಜೀವ ಹೋದ್ರೂ ವಟ್ಟ ಇಲ್ಲಿಂದ ಎದ್ದು ಹೋಗುವುದಿಲ್ಲ, ನಮ್ಮ ಜೀವ ಹೋಗಿ ಮಣ್ಣ ಮಾಡಿ, ಆ ಮೇಲೆ ರೋಡ್ ಮಾಡಿಕೊಂಡ ಅವ್ರು ಹೋಗಲಿ ಎಂದು ಆಕ್ರೋಶ ಹೊರ ಹಾಕಿದರು.
ಒಟ್ಟಾರೆ ಹಲಗಾ-ಮಚ್ಛೆ ಬೈಪಾಸ್ ವಿರೋಧಿಸಿ ರೈತರ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು. ನಮ್ಮ ಜೀವ ಹೋದ್ರೂ ಕೂಡ ನಮ್ಮ ಭೂಮಿ ಬಿಟ್ಟು ಕೊಡೋದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.