hubbali

ಸ್ಕೇಟಿಂಗ್​ನಲ್ಲಿ ಗಿನ್ನಿಸ್​ ದಾಖಲೆಮಾಡಿದ ಹುಬ್ಬಳ್ಳಿ ಬಾಲಕಿ

Share

ಹುಬ್ಬಳ್ಳಿ ಶಿರೂರ ಪಾರ್ಕ್ ನಿವಾಸಿಯಾದ ಕಿಶೋರ ಮತ್ತು ರಶ್ಮಿ ದಂಪತಿಯ ಪುತ್ರಿ ಸ್ತುತಿ ಕಿಶೋರ ಕುಲಕರ್ಣಿ ಸ್ಕೇಟಿಂಗ್​ನಲ್ಲಿ ಗಿನ್ನಿಸ್​ ದಾಖಲೆ ಮಾಡಿದ್ದಾಳೆ.

ಸ್ತುತಿ ಜನವರಿ 8, 2021ರಂದು ಇನ್‌ಲೈನ್ ಸ್ಕೇಟಿಂಗ್ ಮಾಡುತ್ತಾ, ಮೂರು ಹುಲಾಹೂಪ್​​ಗಳನ್ನು ತಿರುಗಿಸುವುದರೊಂದಿಗೆ 100 ಮೀಟರ್‌ ದೂರವನ್ನು ಕೇವಲ 23.45 ಸೆಕೆಂಡ್​ಗಳಲ್ಲಿ ಕ್ರಮಿಸಿ ಗಿನ್ನಿಸ್ ದಾಖಲೆ ಮಾಡಿದ್ದಾಳೆ.

ಗಿನ್ನಿಸ್ ತಂಡ ಸೂಚಿಸಿದ ಮಾರ್ಗ ಸೂಚಿಯನ್ವಯ, ಜನವರಿ 8 ರಂದು ಶಿರೂರ ಪಾರ್ಕ್​ನ ಮುಖ್ಯ ರಸ್ತೆಯಲ್ಲಿ ನಡೆದ ಈ ಪ್ರಯತ್ನದ ಚಿತ್ರೀಕರಣದ ಸಾಕ್ಷ್ಯಗಳನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತಂಡಕ್ಕೆ ಸಲ್ಲಿಸಿದ್ದಾರೆ. ಅವರು ಎಲ್ಲ ತಾಂತ್ರಿಕ ಸಾಕ್ಷ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ದಾಖಲೆ ಅನುಮೋದಿಸಿ ಪ್ರಮಾಣಿಸಿದ್ದಾರೆ. ಸ್ತುತಿ ತನಗೆ ದೊರೆತ 27 ಸೆಕೆಂಡುಗಳ ಗುರಿಯನ್ನು ಕೇವಲ 23.45 ಸೆಕೆಂಡ್​ಗಳಲ್ಲಿ ಪೂರೈಸಿ ದಾಖಲೆ ತನ್ನದಾಗಿಸಿಕೊಂಡಿದ್ದಾಳೆ.

ಲಿಮ್ಯಾ ಬುಕ್ ಆಫ್ ರೆಕಾರ್ಡ್ಸ್, ಏಷಿಯಾ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ರೆಕಾರ್ಡ್ ಆಫ್ ಇಂಡಿಯಾ, ಅಮೇಜಿಂಗ್ ವರ್ಲ್ಡ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಂತಹ ಸಾಧನೆಗೈದು ಮತ್ತೊಂದು ವಿಶ್ವದಾಖಲೆಯ ಗರಿ ಪಡೆದಿದ್ದಾಳೆ. ಈಕೆ ಮುಂದೆ ಸ್ಕೇಟಿಂಗ್ ಹಾಗೂ ಜಿಮ್ನಾಸ್ಟಿಕ್​ನಲ್ಲಿ ಸಾಧನೆ ಮಾಡುವ ಗುರಿ ಹೊಂದಿದ್ದಾಳೆ.

Tags:

error: Content is protected !!