ಕೊರೊನಾ ಲಾಕ್‍ಡೌನ್ ಸಮಯದಲ್ಲಿ ನೇಕಾರಿಕೆ ಬಂದ್ ಆಗಿದ್ದರಿಂದ ಮಾಡಿದ್ದ ಸಾಲ ತೀರಿಸಲಾಗಿದೆ ಮನನೊಂದು ನೇಕಾರನೊರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಬೆಳಗಾವಿಯ ವಡಗಾವಿಯಲ್ಲಿ ನಡೆದಿದೆ.

ಹೌದು ವಡಗಾವಿಯ ತೆಗ್ಗಿನಗಲ್ಲಿಯ ಸಿದ್ಧಲಿಂಗೇಶ್ವರ ಗಂಗಪ್ಪ ಹೊರಕೇರಿ ಎಂದು ಗುರುತಿಸಲಾಗಿದೆ. ನೇಕಾರಿಕೆ ಮಾಡಿಕೊಂಡಿದ್ದ ಮೃಯ ವ್ಯಕ್ತಿ ವಿವಿಧೆಡೆ ಒಟ್ಟು 4 ಲಕ್ಷ 57 ಸಾವಿರ ರೂಪಾಯಿ ಸಾಲವನ್ನು ಮಾಡಿಕೊಂಡಿದ್ದ. ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಯಾವುದೇ ರೀತಿ ಸೀರೆ ವ್ಯಾಪಾರ ನಡೆಯದ ಹಿನ್ನೆಲೆ ಮಾಡಿದ್ದ ಸಾಲ ತೀರಿಸಲಾಗಿದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಪತ್ನಿ ಮಹಾದೇವಿ ಶಹಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮನೆಯ ಹಿಂದಿನ ಬಾಜು ಇದ್ದ ಕಬ್ಬಿಣ ಸಿ ಚನಲ್‍ಗೆ ಉಲಾರ ದಾರದಿಂದ ಕುತ್ತಿಗೆಗೆ ಸುತ್ತಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.