DEATH

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Share

ಕಳೆದ ಮೂರ್ನಾಲ್ಕು ವರ್ಷಗಳಿಂದ ಅಕಾಲಿಕ ಮಳೆಯಿಂದ ಕಂಗಾಲಾಗಿರುವ ರೈತ ವರ್ಗ ಬೆಳೆಗಾಗಿ ಮಾಡಿದ ಸಾಲ ತೀರಿಸಲಾಗದೇ ಆತ್ಮಹತ್ಯೆ ದಾರಿ ತುಳಿತಿದ್ದಾನೆ.ರಾಜ್ಯದಲ್ಲಿ ಒಂದಿಲ್ಲಾ ಒಂದು ದಿನ ರೈತ ಆತ್ಮಹತ್ಯೆ ಸುದ್ದಿ ಕೇಳತಾನೇ ಇರತೇವಿ.

ಹಾಗೇ ನಿನ್ನೆ ಸಾಯಂಕಾಲ ಕೂಡಾ ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದಲ್ಲಿ ಎಪ್ಪತ್ತು ವರ್ಷದ ವೀರಸಗಪ್ಪ ಬಸಪ್ಪ.ಗುದ್ದಿ‌ನ ಎಂಬ ರೈತ ತನ್ನದೇ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.ಕಳೆದ ವರ್ಷ ಬೆಳಗಾಗಿ ಬ್ಯಾಂಕ್ ಆಫ್ ಬರೋಡದಲ್ಲಿ ಒಂದು ಲಕ್ಷ ಐವತ್ತೆರಡು ಲಕ್ಷ ಸಾಲ ಮಾಡಿದ್ದ.ಈ ವರ್ಷ ಮಳೆ ಹೆಚ್ಚಾಗಿ ಬೆಳೆ ಹಾಳಾಗಿದ್ದರ ಹಿನ್ನೆಲೆಯಲ್ಲಿ ಸಾಲ ತೀರಿಸಲು ಆಗದೇ,ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾಲ ಸೂಲ ಮಾಡಿ ಅನ್ನ ಬೆಳೆಯುವ ಅನ್ನದಾತನೇ ದೇಶದ ಬೆನ್ನೆಲುಬು ಅನ್ನುವ ಸರಕಾರಗಳು ಅನ್ನದಾತನ ನೆರವಿಗೆ ಬರದೇ ಹೋದರೆ ರೈತನ ಆತ್ಮಹತ್ಯೆ ಸರಣಿ ಹೀಗೆ ಮುಂದುವರಯುವುದರಲ್ಲಿ ಸಂದೇಹವೇ ಇಲ್ಲ.

Tags:

error: Content is protected !!