ಹೌದು ಬೆಳಗಾವಿಯ ಹುಕ್ಕೇರಿ ಹಿರೇಮಠ ಸರ್ವಧರ್ಮಿಯರು ಬೆಳೆಸುತ್ತಿದೆ ಎಲ್ಲಾ ಸಮುದಾಯದಲ್ಲಿರುವ ಯುವಕರನ್ನು ಕರೆದು ಅವರಿಗೆ ಸ್ಫೂರ್ತಿಯ ಚೇತನರಾಗಿ ಮಾರ್ಗದರ್ಶನ ಮಾಡಿ ಎಲ್ಲಕ್ಕಿಂತ ಮಿಗಿಲು ದೇಶ ಎನ್ನುವುದನ್ನು ತುಂಬುವ ಅಪರೂಪದ ಉತ್ತರ ಕರ್ನಾಟಕದ ಪ್ರತಿಷ್ಠಿತ ಬೆಳಗಾವಿ ಹುಕ್ಕೇರಿ ಹಿರೇಮಠ ಇಂದು ನಾನು ವೇದಿಕೆ ಮೇಲೆ ಮಾತನಾಡಲು ಸಮಾಜದಲ್ಲಿ ಕಾರ್ಯ ಮಾಡಲು ಕಲಿತಿದ್ದೇನೆ ಎಂದರೆ ಅದಕ್ಕೆ ಕಾರಣ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಎಂದು ಹುಕ್ಕೇರಿ ಮಹಾವೀರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಪ್ರಜ್ವಲ್ ಮಹಾವೀರ ನಿಲಜಗಿ ಅವರು ಬೆಳಗಾವಿಯಲ್ಲಿ ಜರುಗಿದ ಮಾಸಿಕ ಸುವಿಚಾರ ಚಿಂತನದ 39ನೆಯ ಮಾಸಿಕ ವಿಚಾರ ಚಿಂತನದಲ್ಲಿ ಅತಿಥಿಗಳಾಗಿ ಮಾತನಾಡಿದರು
ಹಾಗೆಯೇ ರಾಜ್ಯ ಜವಳಿ ಮೂಲಭೂತ ಸೌಕರ್ಯ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷರಾದ ನೀಲಕಂಠ ಮಾಸ್ತಮರಡಿ ಅವರು ಶ್ರೀಗಳಿಂದ ಆಶೀರ್ವಾದವನ್ನು ಸ್ವೀಕರಿಸಿ ಇವತ್ತು ರಾಜ್ಯಮಟ್ಟದಲ್ಲಿ ನಮ್ಮನ್ನೆಲ್ಲ ಜನ ಗುರುತಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಶ್ರೀ ಮಠ ಎಂದರು ಸುವಿಚಾರ ಚಿಂತನದ ಉಪನ್ಯಾಸಕರಾಗಿ ಭಾಗವಹಿಸಿ ಹುಕ್ಕೇರಿ ಕ್ಯಾರಗುಡ್ಡ ಜ್ಞಾನ ಯೋಗಾಶ್ರಮದ ಅಭಿನವ ಮಂಜುನಾಥ ಸ್ವಾಮಿಗಳು ಮಾತನಾಡಿ ನಾವು ನಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿಯನ್ನು ತಿಳಿಸುವ ಅವಶ್ಯಕತೆ ಇದೆ ಏಕೆಂದರೆ ನಾವು ಇನ್ನೊಬ್ಬರು ನಮ್ಮ ಮಕ್ಕಳಿಗೆ ಮಾದರಿಯಾಗಲಿ ಎಂದು ಹೋಗುವುದಕ್ಕಿಂತ ನಮ್ಮ ಮಕ್ಕಳಿಗೆ ನಾವೇ ಮಾದರಿಯಾಗುವ ಹಾಗೆ ನಡೆದುಕೊಂಡರು ಒಳಿತಲ್ಲವೇ ಎಂದರು
ರೈತ ಮುಖಂಡರಾದ ಕಲ್ಯಾಣರಾವ ಮುಚಳಂಬಿ ಅವರು ಮಾತನಾಡಿ ಬೆಳಗಾವಿಯ ಹುಕ್ಕೇರಿ ಹಿರೇಮಠ ಇವತ್ತು ಕನ್ನಡ ಸರ್ವಧರ್ಮೀಯ ಜನರ ಬಾಂಧವ್ಯದ ಬೆಸುಗೆ ಮತ್ತು ಏನೇ ಇದ್ದರೂ ಹೋರಾಟದಲ್ಲಿ ಕೂಡ ಶ್ರೀಮಠ ಮುಂಚೂಣಿಯಲ್ಲಿರುವುದು ಅಭಿಮಾನದ ಸಂಗತಿ ಎಂದರು ಕವಿ ಸಾಹಿತಿ ಬಿಕೆ ಮಲ್ಲಾಬಾದಿ ಯವರು ಸ್ವರಚಿತ ಕವನವನ್ನ ನಿವೇದನೆ ಮಾಡಿದರು ಈ ಸಂದರ್ಭದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡುತ್ತಾ ಎಳೆ ಎಳೆ ಎಲ್ಲಾ ಕೂಡಿ ಹಗ್ಗ ವಾಗುತ್ತವೆ ಆಗ ನಮ್ಮನ್ನೆಲ್ಲ ಯಾರು ಮುರಿಯಲು ಸಾಧ್ಯವಿಲ್ಲ ಹಗ್ಗ ದಪ್ಪವಾಗಿರುತ್ತದೆ ಇವತ್ತು ಹಗ್ಗಗಳು ಎಳೆ ಗಳು ಆಗುತ್ತಿರುವುದು ಖೇದದ ಸಂಗತಿ ಎಂದರು ಸರ್ವ ಜನಾಂಗದ ಶಾಂತಿಯ ತೋಟ ಎಲ್ಲರೂ ಒಗ್ಗಟ್ಟಾಗಿ ಬದುಕೋಣ ಭಾರತವನ್ನು ಮುನ್ನಡೆಸೋಣ ಎಂದರು ಸುವಿಚಾರ ಚಿಂತನದಲ್ಲಿ ವೇದಮೂರ್ತಿ ಮೃತ್ಯುಂಜಯಸ್ವಾಮಿ ಶಿವಾನಂದ್ ಹಿರೇಮಠ್ ಅವರು ಪ್ರಸಾದ ಸೇವೆಯನ್ನು ಸಲ್ಲಿಸುವುದರೊಂದಿಗೆ ತಮ್ಮ ಹುಟ್ಟುಹಬ್ಬದ ಪೂರ್ವ ದಿನವನ್ನು ಗುರುಗಳ ಸೇವೆಯೊಂದಿಗೆ ಕಳೆದಿರುವ ಅಂತದ್ದು ವಿಶೇಷವಾಗಿ ಇರುವಂತದ್ದು ಇದೇ ಸಂದರ್ಭದಲ್ಲಿ ಬೆಳಗಾವಿಯ ಶಿವಾನಂದ ಹಿರೇಮಠ್ ಶ್ರೀಗಳಿಂದ ಆಶೀರ್ವಾದವನ್ನು ಸ್ವೀಕರಿಸಿದರು ಗುರುಶಾಂತ ವಾಣಿಯ ಖ್ಯಾತ ಜ್ಯೋತಿಷ್ಯ ವೇದಮೂರ್ತಿ ಸಂಪತ್ ಕುಮಾರ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು