ಬೆಳಗಾವಿ ರಾಮಲಿಂಗಖಿಂಡ ಗಲ್ಲಿಯ ಅಶೋಕ ಚೌಕದಲ್ಲಿ ಶಿವಸೇನೆ ವತಿಯಿಂದ ಮರಾಠಿ ಪರ ಹೋರಾಟದಲ್ಲಿ ಪ್ರಾಣ ಕಳೆದುಕೊಂಡವರ ನೆನಪಿನಲ್ಲಿ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿವಸೇನೆ ಪ್ರಮುಖರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಾಠಿ ಭಾಷಿಕ ಹೋರಾಟಗಾರರ ಪರ ಘೋಷಣೆ ಮೊಳಗಿಸಿದರು.

ಬೆಳಗಾವಿಯಲ್ಲಿ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಶಿವಸೇನೆ ರಾಮಲಿಂಗಖಿಂಡ ಗಲ್ಲಿಯ ಅಶೋಕ ಚೌಕದಲ್ಲಿ ಶಿವಸೇನೆ ವತಿಯಿಂದ ಮರಾಠಿ ಪರ ಹೋರಾಟದಲ್ಲಿ ಪ್ರಾಣ ಕಳೆದುಕೊಂಡವರ ನೆನಪಿನಲ್ಲಿ ಹುತಾತ್ಮ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಂಡಿತ್ತು. ಶಿವಸೇನೆ ಪ್ರಮುಖರು, ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹುತಾತ್ಮರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು.
ಈ ವೇಳೆ ಶಿವಸೇನೆ ಪ್ರಮುಖರು ಮತ್ತೆ ಗಡಿ ಕ್ಯಾತೆ ಎತ್ತಿದರಲ್ಲದೆ, ಮರಾಠಿ ಜನರು ಮಹಾರಾಷ್ಟ್ರಕ್ಕೆ ಸೇರಲು ಸಂಘಟಿತರಾಗಬೇಕು ಎಂದು ಮರಾಠಿ ಭಾಷಿಕ ಜನರಿಗೆ ಹಿತ ವಚನ ಹೇಳಿದರು.
ಈ ವೇಳೆ ಜಿಲ್ಲಾ ಶಿವಸೇನಾ ಪ್ರಮುಖ ಪ್ರಕಾಶ ಶಿರೋಳಕರ ಮಾತನಾಡಿ, ಮರಾಠಿ ಭಾಷಿಕ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನೆ ಪ್ರಮುಖ ಉದ್ಧವ್ ಠಾಕ್ರೆ ಹೇಳಿರುವುದು ಸರಿಯಾಗಿಯೇ ಇದೆ. ಈ ಬಾರಿ ಮರಾಠಿ ಭಾಷಿಕರನ್ನು ಒಗ್ಗೂಡಿಸಿ ಬೆಳಗಾವಿ ಜಿಲ್ಲೆಯಲ್ಲಿ ಎಲ್ಲ ಚುನಾವಣೆಗಳನ್ನು ಎದುರಿಸಲು ಶಿವಸೇನೆ ಸಜ್ಜಾಗುತ್ತಿದೆ. ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ವಿಧಾನಸಭೆ, ಲೋಕಸಭೆ ಹೀಗೆ ಎಲ್ಲ ಚುನಾವಣೆಗಳಲ್ಲೂ ಸ್ಪರ್ಧೆಗೆ ಇಳಿಯಲಿದೆ. ಮರಾಠಿ ಭಾಷೆಕರು ಯಾವುದೇ ಪಕ್ಷದಲ್ಲಿ ಇರಲಿ ಮರಾಠಿ ಭಾಷೆ, ಸಂಸ್ಕøತಿಯ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು. ಈ ವಿಚಾರದಲ್ಲಿ ಶಿವಸೇನೆಯನ್ನು ಬೆಂಬಲಿಸಬೇಕು, ಅಂದಾಗ ಮಾತ್ರ ಹುತಾತ್ಮ ಯೋಧರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತೆ ಆಗುತ್ತದೆ ಎಂದು ಮನವಿ ಮಾಡಿದರು.
ಈ ವೇಳೆ ಮಾಜಿ ಶಾಸಕ ಮನೋಹರ ಕಿಣೇಕರ, ಪ್ರಕಾಶ ಮರಗಾಲೆ, ನಾಗನೂರಿ, ಮಾಲೋಜಿ ಅಷ್ಟೇಕರ, ಪ್ರವೀಣ ತೇಜಂ, ಮದನ ಬಾಮಣೆ, ದತ್ತಾ ಜಾಧವ್, ಕೃಷ್ಣಾ ಹುಂದ್ರೆ, ಶುಭಂ ಶೇಳಕೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಒಟ್ಟಿನಲ್ಲಿ ಮರಾಠಿ ಭಾಷೆ, ಸಂಸ್ಕøತಿಯನ್ನು ಮುಂದೆ ಮಾಡಿಕೊಂಡು ಬೆಳಗಾವಿಯಲ್ಲಿ ಶಿವಸೇನೆ ಬಲಗೊಳಿಸುವ ಪ್ರಯತ್ನ ಮತ್ತೆ ಚುರುಕಾಗಿದೆ ಎಂಬ ವಿಶ್ಲೇಷಣೆಗಳು ಕೇಳುತ್ತಿವೆ. ಲೋಕಸಭೆ ಉZಪಚುನಾವಣೆ, ಮಹಾನಗರ ಪಾಲಿಕೆ ಚುನಾವಣೆ ಹೊತ್ತಿನಲ್ಲಿ ಶಿವಸೇನೆಯಿಂದ ಹುತಾತ್ಮರ ಸ್ಮರಣೆ, ಗುಣಗಾನ ಕುತೂಹಲ ಕೆರಳಿಸಿದೆ.