ಬೆಳಗಾವಿಯ ಸಮಾದೇವಿ ಮಂದಿರದಲ್ಲಿ ಬಿಜೆಪಿ ಮಹಿಳಾ ಮುಖಂಡೆ ಶಿಲ್ಪಾ ಕೆಕರೆ ಆಯೋಜಿಸಿದ್ದ ಅರಿಷಿಣ ಕುಂಕುಮ ಕಾರ್ಯಕ್ರಮದಲ್ಲಿ ಮಹಿಳೆಯರ ದರ್ಬಾರ್ ಕಂಡು ಬಂತು.

ಸಮಾದೇವಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮವನ್ನು ಬಿಜೆಪಿ ಮಹಾನಗರ ಕಾರ್ಯದರ್ಶಿ ಶಿಲ್ಪಾ ಕೆಕರೆ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಮಹಿಳೆಯರಿಗೆ ಅರಿಷಿಣ-ಕುಂಕುಮ ನೀಡಿ ಗೌರವಿಸಲಾಯಿತು. ಈ ವೇಳೆ ಬಿಜೆಪಿ ಮಹಿಳಾ ಮುಖಂಡರಾದ ಉಜ್ವಲಾ ಬಡವನಾಚೆ, ಡಾ.ಸೋನಾಲಿ ಸರ್ನೋಬತ್, ದೀಪಾ ಕುಡಚಿ, ಲೀನಾ ಟೋಪನ್ನವರ, ಮಾಜಿ ಉಮಮೇಯರ್ ಸಂಜೋತ್ ಬಾಂದೇಕರ್ ಸೇರಿದಂತೆ ಇನ್ನಿತರರು ಗಣ್ಯರು ಉಪಸ್ಥಿತರಿದ್ದರು.