Chikkodi

ವೈದ್ಯಕೀಯ ಫಾರ್ಮಸಿ ಅಧ್ಯಯನದಿಂದ ಉಜ್ವಲ ಭವಿಷ್ಯ ಡಾ! ಎನ್ ಎ ಮಗದುಮ್ಮ

Share

ಫಾರ್ಮಸಿ ಅಧ್ಯಯನದಿಂದ ವಿಧ್ಯಾರ್ಥಿಗಳಿಗೆ ಉಜ್ವಲಭವಿಷ್ಯ ಇದ್ದು,ಕಠಿಣ ಪರಿಶ್ರಮದ ಅಧ್ಯಯನ ಮೂಲಕ ಉಜ್ವಲ ಭವಿಷ್ಯವನ್ನು ಕಟ್ಟಿಕೊಳ್ಳುವಂತೆ ವಿಧ್ಯಾರ್ಥಿಗಳಿಗೆ ಡಾ! ಎನ್ ಎ ಮಗದುಮ್ಮ ಅವರು ಕರೆ ನೀಡಿದರು.

ಚಿಕ್ಕೋಡಿ ತಾಲೂಕಿನ ಅಂಕಲಿಯ ಗೊಮಟೇಶ ಶಿಕ್ಷಣ ಸಂಸ್ಥೆಯ ಶ್ರಿಮತಿ ಲಲಿತಾ ಮಗದುಮ್ಮ ಫಾರ್ಮಸಿ ಕಾಲೇಜಿನ ಪ್ರಥಮ ವರ್ಷದ ವಿಧ್ಯಾರ್ಥಿಗಳ ಸ್ವಾಗತ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಡಾ! ಎನ್ ಎ ಮಗದುಮ್ಮ ಅವರು ವಿಧ್ಯಾರ್ಥಿಗಳು ತಂದೆ-ತಾಯಿಗಳ ಆಸೆಯನ್ನು ಈಡೇರಿಸಲು ಕಠಿಣವಾಗಿ ಪರಿಶ್ರಮ ಪಡಬೇಕು.ಫಾರ್ಮಸಿ ವೈದ್ಯಕೀಯ ಕ್ಷೇತ್ರದ ಸಮಾನವಾದ ಕ್ಷೇತ್ರವಾಗಿದೆ.

ಫಾರ್ಮಸಿ ವಿಧ್ಯಾರ್ಥಿಗಳು ಶಿಸ್ತು,ಸಂಯಮ,ಸಮಯದ ಪರಿಪಾಲನೆ,ನಾಯಕತ್ವದ ಗುಣ,ವ್ಯಕಿತ್ವದ ವಿಕಸನ ಸೇರಿದಂತೆ ಸಂಪನ್ಮೂಲ ಗುಣಗಳನ್ನು ಅಳವಡಿಸಿಕೊಂಡು ಯಶಸ್ವಿ ಜೀವನ ರೂಪಿಸಿಕೊಳ್ಳಿ.
ಎರಡು ವರ್ಷಗಳ ಅವಧಿಯಲ್ಲಿ ವಿಧ್ಯಾರ್ಥಿಗಳು ಸಂಶೋಧನಾ ತ್ಮಕ ಅಧ್ಯಯನ ಮೂಲಕ ಭದ್ರಭವಿಷ್ಯವನ್ನು ಕಟ್ಟಿಕೊಳ್ಳುವಂತೆ ಡಾ! ಎನ್ ಎ ಮಗದುಮ್ಮ ಅವರು ವಿಧ್ಯಾರ್ಥಿಗಳಿಗೆ ಕರೆ ನೀಡಿದರು.

ಪ್ರಾರಂಭದಲ್ಲಿ ಸರಸ್ವತಿದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ದ್ವೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂಧರ್ಭದಲ್ಲಿ ಡಾ! ಲಲಿತಾ ಮಗದುಮ್ಮ,, ಸಚಿನ ಚೌಗಲೆ,ಬಸವರಾಜ ಗಂಟಿ,ಎನ್ ಎಸ್ ನಿಡಗುಂದಿ, ಪೂಜಾ ಶಿಂಧೆ,ಅವಧೂತ ಅಥಣಿಕರ,ಸುಜಿತ ಲಾಟವಡೆ,ಸಿದ್ದು ಕರೋಲಿ,ಸತೀಶ ಜಾಧವ,ಸುನೀಲ್ ಜನಾಜ,ಬಾಹುಬಿ ಬನಾಜ,ಯಾಕುಬ ತಾಂಬಟ,ಪ್ರವೀಣ ಪಾಟೀಲ,ಮಹೇಶ್ವರಿ ಜಾಧವ ಸೇರಿದಂತೆ ಶಿಕ್ಷಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Tags:

error: Content is protected !!