ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಹಿಂದೆ ಕಲಬುರಗಿ ನ್ಯಾಯಾಲಯದ ಮೋರೆ ಹೋಗಿದ್ದ ವಾರ್ಡ್ ನಂ ೧ ಮಹಾನಗರ ಪಾಲಿಕೆ ಕಾರ್ಪೊರೆಟರ್ ಆನಂದ ಧುಮಾಳೆಯವರು ಈಗ ಮತ್ತೆ ಸುಪ್ರೀಂ ಕೊರ್ಟ್ ಮೊರೆ ಹೋಗಿ ಚುನಾವಣೆ ಪ್ರಕ್ರಿಯೆಗೆ ತಡೆಯಾಜ್ಞೆ ತಂದಿದ್ದಾರೆ.

ಈ ಕುರಿತು ಮಾತನಾಡಿರುವ ಆನಂದ ಧುಮಾಳೆ ಈ ಮೊದಲು ನಾವು ಕಲಬುರಗಿ ಬೆಂಚ್ ಗೆ ಮಹಾನಗರ ಪಾಲಿಕೆ ವಾರ್ಡಗಳ ವಿಂಗಡನೆ ಸರಿಯಿಲ್ಲ ಎನ್ನುವದಕ್ಕಾಗಿ ನ್ಯಾಯಾಲಯಕ್ಕೆ ಹೋಗಿದ್ದೇವು. ಆಗ ಕಲಬುರಗಿ ಪೀಠವು ವಾರ್ಡಗಳ ವಿಂಗಡನೆ ಸರಿ ಪಡಿಸಿ ಚುನಾವಣೆ ನಡೆಸಿ ಎಂದು ಆದೇಶಿಸಿತ್ತು. ಒಂದು ವರ್ಷವಾದ್ರನೂ ಚುನಾವಣೆ ನಡೆಯಲಿಲ್ಲಾ, ಬಳಿಕ ವಾರ್ಡ್ ವಿಂಗಡನೆ ಸರಿಯಾಗಿ ಆಗಿಲ್ಲಾ ಎಂದು ಕೆಲವರು ಬೆಂಗಳೂರು ಉಚ್ಚ ನ್ಯಾಯಾಲಯದ ದ್ವೀ ಪೀಠದ ನ ಮೊರೆ ಹೋಗಿದ್ದರು.
ಆಗ ಮಾನ್ಯ ಉಚ್ಚ ನ್ಯಾಯಾಲಯದ ದ್ವೀಪೀಠವು ಆರು ತಿಂಗಳಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆಸಿ ಎಂದು ಆದೇಶ ನೀಡಿತು. ಮಹಾನಗರ ಪಾಲಿಕೆ ಕೆಯವ್ರಿಗೆ ಎಂಟು ತಿಂಗಳ ಒಳಗೆ ಚುನಾವಣೆ ಮಾಡಲು ಆದೇಶಿಸಿತ್ತು. ಆದ್ರೆ ಅದಕ್ಕಿಂತ ಪೂರ್ವದಲ್ಲೇ ವಾರ್ಡ್ ವಿಂಗಡನೆ, ಕ್ಯಾಟಗೇರಿ ಎಲ್ಲವೂ ಇದ್ದರೂ ಚುನಾವಣೆ ಪ್ರಕ್ರಿಯೆ ತಡವಾಗುತ್ತಿರುವದನ್ನು ಪ್ರಶ್ನಿಸಿ ಕೊರ್ಟ್ ಮೋರೆ ಹೋಗಿ ಈಗ ನಡೆಯುತ್ತಿರುವ ಚುನಾವಣೆ ಪ್ರಕ್ರಿಯೆಗೆ ತಡೆಯಾಜ್ಞೆ ತಂದಿದ್ದು ಅತಿ ಬೇಗನೆ ಚುನಾವಣೆ ನಡೆಸುವಂತೆ ಆದೇಶಿಸಲು ಕೊರ್ಟ್ ಮೊರೆ ಹೋಗಿರುವದಾಗಿ ಆನಂದ ಧುಮಾಳೆ ತಿಳಿಸಿದರು