2021ರ ಫೆಬ್ರವರಿ 15ರಿಂದ ದೇಶದ ಎಲ್ಲ ವಾಹನಗಳಿಗೆ ಎಫ್‍ಎಎಸ್ ಟ್ಯಾಗ್ ಬಳಕೆ ಕಡ್ಡಾಯವಾಗಲಿದೆ. ಹೀಗಾಗಿ ವಾಹನ ಸವಾರರು ಶೀಘ್ರವೇ ಫಾಸ್ಟ್ಯಾಗ್ ಮಾಡಿಸಿಕೊಳ್ಳಿ ಹೈವೇಗಳಲ್ಲಿ ಸುಗಮವಾಗಿ ಸಂಚಾರ ಮಾಡಿ.
ಹೌದು ಫೆಬ್ರವರಿ 15ರಿಂದ ಟೋಲ್ ಗೇಟ್‍ಗಳಲ್ಲಿ ಸಂಪೂರ್ಣವಾಗಿ ಫಾಸ್ಟ್ ಟ್ಯಾಗ್ ಪಾವತಿ ಕಡ್ಡಾಯ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ಆದೇಶ ಹೊರಡಿಸಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ, ಪ್ರಸ್ತುತ ದೇಶಾದ್ಯಂತ ಒಟ್ಟು ಶೇ.75ರಿಂದ 80ರಷ್ಟು ಫಾಸ್ಟ್ಯಾಗ್ ಮೂಲಕ ಪಾವತಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 15ರಿಂದ ಸಂಪೂರ್ಣವಾಗಿ ಟೋಲ್ ಗೇಟ್‍ಗಳಲ್ಲಿ ನಗದು ರಹಿತವಾಗುವ ಮೂಲಕ ಶೇ.100 ರಷ್ಟು ಫಾಸ್ಟ್ಯಾಗ್ ಮೂಲಕ ಹಣ ಪಾವತಿಯಾಗಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.