Belagavi

ರೈಲಿಗೆ ತಲೆ ಕೊಟ್ಟು ಬೆಳಗಾವಿಯಲ್ಲಿ ದಂಪತಿ ಆತ್ಮಹತ್ಯೆಗೆ ಯತ್ನ..ಪತಿ ಸಾವು..ಪತ್ನಿಗೆ ಗಾಯ

Share

ರೈಲಿಗೆ ತಲೆಕೊಟ್ಟು ದಂಪತಿ ಆತ್ಮಹತ್ಯೆಗೆ ಯತ್ನ ಮಾಡಿದ್ದು ಘಟನೆಯಲ್ಲಿ ಪತಿ ಸಾವನ್ನಪ್ಪಿ, ಪತ್ನಿಗೆ ಗಂಭೀರ ಗಾಯವಾಗಿರುವ ಧಾರುಣ ಘಟನೆ ಬೆಳಗಾವಿ ನಗರದ ಒಂದನೇ ರೇಲ್ವೆ ಗೇಟ್ ಬಳಿ ನಡೆದಿದೆ.
ಹೌದು ಬೆಳಗಾವಿ ತಾಲೂಕಿನ ಹಿಂಡಲಗಾ ನಿವಾಸಿ ರಾಕೇಶ್ ಪಾಟೀಲ್ ಮೃತ ದುರ್ದೈವಿ ಆಗಿದ್ದು, ಪತ್ನಿಗೆ ಗಂಭೀರ ಗಾಯವಾಗಿರುವ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ ಗೂಡ್ಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಈ ದಂಪತಿ ಯತ್ನಿಸಿದೆ. ಸ್ಥಳಕ್ಕೆ ಬೆಳಗಾವಿ ರೇಲ್ವೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮೃತ ವ್ಯಕ್ತಿಯ ಶವವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದ್ದು. ಈ ವೇಳೆ ರೈಲ್ವೇ ಸಿಪಿಐ ಜೆ.ಎನ್.ಕಾಲಿಮಿರ್ಚಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ದಂಪತಿ ಸಾವಿಗೆ ನಿಖರ ಕಾರಣ ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ.

Tags:

error: Content is protected !!