ವಿಜಯಪುರ ನಗರದ ಪೊಲಿಸ್ ಹೆಡ್ ಕ್ವಾರ್ಟರ್ಸ್ ಮುಂದೆ ಇರುವಂಥಹ ರೇಣುಕಾ ಎಲ್ಲಮ್ಮದೇವಿ ತೃತೀಯ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ದೇವಸ್ಥಾನ ಕಮೀಟಿಯ ವತಿಯಿಂದ ಮಂಗಳವಾರ ಬೆಳಿಗ್ಗೆ ರೇಣುಕಾ ಎಲ್ಲಮ್ಮದೇವಿಗೆ ಅಭಿಷೇಕ, ಅಲಂಕಾರ ಪೂಜೆಗಳ ಜೊತೆಯಲ್ಲಿ ಪಲ್ಲಕ್ಮಿ ಉತ್ಸವ, ಚೌಡಕಿ ಪದಗಳು ಹಾಗೂ ಹಲಗಿ ಮಜಲು ಕಾರ್ಯಕ್ರಮ ಜರುಗಿದವು. ಬೆಳಿಗ್ಗೆ ನಡೆದ ಪೂಜಾ ಅಲಂಕಾರ ಹಾಗೂ ಪಲ್ಲಕ್ಕಿ ಉತ್ಸವದಲ್ಲಿ ಶ್ರೀದೇವಿ ಮಂದಿರದ ಸುತ್ತಲೂ ಆರತಿ ಜೊತೆಗೆ ಮುತ್ತೈದೆಯರು ಭಾಗವಹಿಸಿ ಮೆರುಗು ತಂದರು. ಇನ್ನೂ ಪಲ್ಲಕ್ಕಿಯಲ್ಲಿ ದೇವಿಯ ಮೂರ್ತಿಯನ್ನು ಇಟ್ಟು ಪೂಜಿಸಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆ ಬಳಿಕ ರೇಣುಕಾ ಎಲ್ಲಮ್ಮ ದೇವಿಗೆ ಆರತಿ ಮಾಡಿ ಪೂಜೆ ಸಲ್ಲಿಸಲಾಯಿತು. ದೇವಿ ಮಹಾತ್ಮೆ ಸಾರುವ ಭಕ್ತಿಗೀತೆಗಳನ್ನು ಹಾಡಲಾಯಿತು. ಬಳಿಕ ಕುಂಬಳಕಾಯಿ ಒಡೆಯಲಾಯಿತು. ಇನ್ನೂ ಈ ಜಾತ್ರಾ ಮಹೋತ್ಸವ ದ ಕುರಿತು ಮಾತನಾಡಿದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಯವ್ರು ವಿಜಯಪುರ ನಗರದ ಪೊಲಿಸ್ ಹೆಡ್ ಕ್ವಾರ್ಟರ್ಸ್ ಮುಂದೆ ಇರುವ ಎಲ್ಲಮ್ಮದೇವಿ ಜಾಗೃತ ದೇವತೆಯಾಗಿದ್ದು ಅಪಾರವಾದ ಭಕ್ತರ ಗಣವನ್ನು ಹೊಂದಿದ್ದಾಳೆ.
ಸುಮಾರು ಎರಡು ನೂರು ವರ್ಷಗಳ ಇತಿಹಾಸ ಈ ದೇವಸ್ಥಾನಕ್ಕೆ ಇದ್ದು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದೇವಸ್ಥಾನ ಜಾಗೆಯನ್ನು ಅತಿಕ್ರಮಣ ಮಾಡಿಕೊಂಡಿದ್ದರು. ತಮ್ಮ ಹಾಗೂ ಭಕ್ತರ ಹೊರಾಟದ ಫಲವಾಗಿ ದೇವಸ್ಥಾನವು 1999 ರಲ್ಲಿ ತಮ್ಮ ಸುಪರ್ದಿಗೆ ತೆಗೆದುಕೊಂಡು ಭವ್ಯ ಮಂದಿರ ಕಟ್ಟಲಾಯಿತು.
ಅಂದಿನಿಂದ ಇಂದಿನವರೆಗೂ ಜಾತ್ರಾ ಮಹೋತ್ಸವ ನಡೆಸುತ್ತಾ ಬರುತ್ತಿದ್ದೇವೆ, ಜಾತ್ರೆಯ ಅಂಗವಾಗಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅನ್ನಪ್ರಸಾದ ನಡೆಯುತ್ತದೆ ಎಂದು ತಿಳಿಸಿದರು.ಇನ್ನೂ ಈ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ವಿಜಯ ಶಾಪೇಟಿ, ಶಿವಾಜಿ ಪಾಟೀಲ, ಅಜಿತ ನಾಗಠಾಣ, ತುಳಸಿರಾಮ ಕಾಳೆ, ಅನರ ಗರುಡಕರ, ಕಲ್ಲುಗೌಡ ಹರನಾಳ, ಗುರು ಭಂಡಾರಕರ, ಲಕ್ಷ್ಮಣ ಉಪ್ಪಾರ, ಸಂದೀಪ ಕಾಳೆ ಹಾಗೂ ಸಚಿನ್ ಅಡಕಿ ಸೇರಿದಂತೆ ಹಲವು ಭಕ್ತರು ಭಾಗವಹಿಸಿದ್ದರು.