ಬೆಳಗಾವಿ: ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ದ ನೆಹರು ಯುವ ಕೇಂದ್ರ, ಬೆಳಗಾವಿ ಜಿಲ್ಲೆಯ 14 ತಾಲೂಕುಗಳಲ್ಲಿ ತಾಲೂಕಿಗೆ ಇಬ್ಬರಂತೆ ಗೌರವಧನ ಆಧಾರದ ಮೇರೆಗೆ ಕೆಲಸ ಮಾಡಲು ಹಾಗೂ ನೆಹರು ಯುವ ಕೇಂದ್ರ ಬೆಳಗಾವಿ ಕಛೇರಿಗೆ, ಇಬ್ಬರು ಕಂಪ್ಯೂಟರ್ ಕೆಲಸ ಮಾಡಲು ಬೆಳಗಾವಿ ನಗರದಿಂದ ರಾಷ್ಟ್ರೀಯ ಯುವ ಸ್ವಯಂ ಸೇವಕರ ಹುದ್ದೆಗಾಗಿ 1 ವರ್ಷದ ಅವಧಿಗೆ ತಾತ್ಕಾಲಿಕ ಕೆಲಸ ಮಾಡಲು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ,
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ (ಹತ್ತನೇ ತರಗತಿ ಪಾಸ್) ಪಾಸಾಗಿರಬೇಕು, ಹಾಗೂ 29 ವರ್ಷದ ಒಳಗಿನವರಾಗಿರಬೇಕು. ಹಾಗು ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 5000.00 ಗೌರವಧನ ನೀಡಲಾಗುವುದು. ಅಭ್ಯರ್ಥಿಗಳು ವಾಸವಿರುವ ವಿಳಾಸದ ತಾಲೂಕಿಗೆ ಮಾತ್ರ ಅರ್ಜಿ ಸಲ್ಲಿಸಬೇಕು.
ಶಿಸ್ತಿನಿಂದ ಕೂಡಿದ ಅರ್ಪಣಾ ಮನೋಭಾವದ ಯುವ ಸ್ವಯಂ ಸೇವಕರು ಆರೋಗ್ಯ, ಸಾಕ್ಷರತೆ, ನೈರ್ಮಲ್ಯ, ಯುವಕ/ಯುವತಿ/ಮಹಿಳಾ ಮಂಡಳ ರಚನೆ, ಯುವ ಕಾರ್ಯಕ್ರಮಗಳು, ಹಾಗೂ ಲಿಂಗ ಮತ್ತಿತರ ಸಾಮಾಜಿಕ ವಿಷಯಗಳ ಬಗ್ಗೆ ಪ್ರಚಾರ ಮಾಡುವ ಕೆಲಸವಿರುತ್ತದೆ.
ಈ ಕೆಲಸ ಮಾಡಲು ಇಚ್ಚೆಯುಳ್ಳ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು www.nyks.nic.in ಪಡೆಯ ಬಹುದು, ಹಾಗೂ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಜಿಲ್ಲಾ ಯುವ ಅಧಿಕಾರಿಗಳು, ನೆಹರು ಯುವ ಕೇಂದ್ರ ಬೆಳಗಾವಿ. ಸಿ.ಟಿ.ಎಸ್ ನಂ 9663 – ಪ್ಲಾಟ್ ನಂ 2367 ಅಣ್ಣಪೂರ್ಣ ನಿಲಯ ಸೆಕ್ಟರ್ ನಂ – 11 ಪಸ್ಟ್ ಕ್ರಾಸ್ ಮಹಾಂತೇಶ ನಗರ, ಬೆಳಗಾವಿ. ಇವರಿಂದ ಪಡೆದು ಫೆಬ್ರುವರಿ 20 ರೊಳಗಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಈ ಮೇಲೆ ತಿಳಿಸಿದ ವಿಳಾಸಕ್ಕೆ ಸಲ್ಲಿಸಲು ಪತ್ರಿಕಾ ಪ್ರಕಟಣೆ ಮೂಲಕ ಕೋರಲಾಗಿದೆ.