ರಾಮದುರ್ಗ ತಾಲೂಕಿನ 8 ನೇ ಕನ್ನಡ ಸಾಹಿತ್ಯ ಸಮ್ಮೇಳನ ಹುಲಕುಂದ ಗ್ರಾಮದ ರಾಮೇಶ್ವರ ಸಭಾ ಭವನದ ಭೀಮಕವಿ ಪ್ರಧಾನ ವೇದಿಕೆ ಮೇಲೆ ಜರುಗಿತು.
ಮುಂಜಾನೆ ರಾಮೇಶ್ವರ ಶಿಕ್ಷಣ ಸಂಸ್ಥೆಯ ಅದ್ಯಕ್ಷ ವೈ ಎಚ್ ಮುಂಬರೆಡ್ಡಿ ರಾಷ್ಟ್ರ ದ್ವಜ, ಕಸಾಪ ಜಿಲ್ಲಾದ್ಯಕ್ಷೆ ಮಂಗಲಾ ಮೆಟ್ಟಗುಡ್ಡ ಪರಿಷತ್ ದ್ವಜ ಹಾಗೂ ಕಸಾಪ ತಾಲೂಕಾ ಅದ್ಯಕ್ಷ ಪಾಂಡುರಂಗ ಜಟಗನ್ನವರ ನಾಡ ದ್ವಜಾರೋಹಣ ನೇರವೆರಿಸಿದರು.
ನಂತರ ಗ್ರಾಮ ಪಂಚಾಯತಿ ಅದ್ಯಕ್ಷ ರಮೇಶ ಪಾತ್ರೋಟ ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಸಮ್ಮೇಳನ ಅದ್ಯಕ್ಷ ಡಾ, ರಾಜೇಂದ್ರ ಅಣ್ಣಾನವರನ್ನು ಶ್ರೀಂಗಾರಗೋಂಡ ಚಕ್ಕಡಿ ಮತ್ತು ಆನೆ ಅಂಬಾರಿಗಳೊಂದಿಗೆ ಮೇರವಣೆಗೆ ಮೂಲಕ ಸಭಾ ಮಂಟಪಕ್ಕೆ ಬರಮಾಡುಕೋಳ್ಳಲಾಯಿತು.
ನಂತರ ನಡೆದ ಪ್ರಧಾನ ಸಮಾರಂಭದಲ್ಲಿ ಗೋಕಾಕ ಮರಡಿ ಮಠದ ಅದೃಶ್ಯ ಪವಾಡೆಶ್ವರ ಸ್ವಾಮಿಜಿ ಮತ್ತು ಚಿಪ್ಪಲಕಟ್ಟಿ ಬೃಹನ್ಮಠದ ಅಭಿನವ ಸಿದ್ದಲಿಂಗ ಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ರಾಮದುರ್ಗ ಶಾಸಕ ಮಹಾದೇವಪ್ಪಾ ಯಾದವಾಡ ದೀಪ ಬೇಳಗಿಸುವ ಮೂಲಕ ಚಾಲನೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಅದ್ಯಕ್ಷ ಪಾಂಡುರಂಗ ಜಟಗನ್ನವರ ಶ್ರೀ ಗಳನ್ನು, ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.
ಕಾಸಾಪ ಜಿಲ್ಲಾ ಅದ್ಯಕ್ಷೆ ಮಂಗಲಾ ಮೆಟಗುಡ್ಡ ಆಶಯ ಭಾಷನದಲ್ಲಿ ಮಾತನಾಡುತ್ತಾ ನಮ್ಮ ನಾಡಿನ ಭಾಷೆ, ಸಂಸ್ಕೃತಿ,ಆಚಾರ ವಿಚಾರ ಕನ್ನಡದ ಶಕ್ತಿಯನ್ನು ನಮ್ಮ ಮುಂದಿನ ಯುವ ಜನಾಂಗಕ್ಕೆ ಪರಿಚಯಿಸುವ ದೃಷ್ಟಿಯಿಂದ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಪ್ರತಿ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವ ಮೂಲಕ ಚಿಂತನ ಮಂಥನ ಮಾಡಲಾಗುತ್ತಿದೆ ಎಂದರು ( )
ವೇದಿಕೆ ಮೇಲೆ ಜಿಲ್ಲಾ ಪಂಚಾಯತ ಸದಸ್ಯ ರಮೇಶ ದೇಶಪಾಂಡೆ, ಡಾ,ಕಲ್ಯಾಣಮ್ಮ ಲಂಗೋಟಿ, ರಾಮಣ್ಣಾ ಬ್ಯಾಟಿ, ರಮೇಶ ಅರಿಕೆರಿ ಉಪಸ್ಥಿತರಿದ್ದರು.
ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕ ಮದಾದೇವಪ್ಪಾ ಯಾದವಾಡ ಕನ್ನಡ ಉಳುವಿಗಾಗಿ ನಮ್ಮ ಸಾಹಿತಿಗಳು ಕನ್ನಡ ಭಾಷೆಯನ್ನು ಶ್ರೀಮಂತವಾಗಿಸಿದ್ದಾರೆ ರಾಮದುರ್ಗ ತಾಲೂಕಿನಲ್ಲಿ ಕನ್ನಡ ಭವನವನ್ನು ನಿರ್ಮಿಸಲು 10 ಲಕ್ಷ ರೂಪಾಯಿಗಳ ಅನುದಾನ ನೀಡಲಾಗುವದು , ಗಡಿಭಾಗದ ನಿಪ್ಪಾಣಿ, ಬೆಳಗಾವಿ, ಕಾರವಾರ, ಅಕ್ಕಲಕೋಟ ಕರ್ನಾಟಕದ ಅವಿಭಾಜ್ಯ ಅಂಗಗಳು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ ಠಾಕ್ರೆ ಮೇಲಿಂದ ಮೇಲೆ ಗಡಿ ವಿಷಯ ತಗೆದು ಪ್ರಚಾರ ಗಿಟ್ಟಿಸಿಕೋಳ್ಳುವ ಪ್ರಯತ್ನ ಮಾಡುತ್ತಿದ್ದಾನೆ,ಮಹಾಜನ ವರದಿಯೇ ಅಂತಿಮ ಎಂದರು,
ಕಸಾಪ ತಲೂಕಾ ಅದ್ಯಕ್ಷ ಪಾಂಡುರಂಗ ಜಟಗನ್ನವರ ಮಾತನಾಡಿ ಕನ್ನಡ ನುಡಿ ಹಬ್ಬವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ಜಿಲ್ಲೆಯ ಸಮಸ್ತ ಕಸಾಪ ಸದಸ್ಯರಿಗೆ, ಸಾಹಿತಿಗಳಿಗೆ ಮತ್ತು ಕನ್ನಡಾಭಿಮಾನಿಗಳಿಗೆ ರಾಮದುರ್ಗ ತಾಲೂಕಿನ ಸಮಸ್ತ ಜನರ ಪರವಾಗಿ ಅಭಿನಂದನೆ ಸಲ್ಲುಸುವದಾಗಿ ಹೇಳಿದರು,
ಈ ಸಂದರ್ಭದಲ್ಲಿ ಕೋಶಾದ್ಯಕ್ಷ ಚನ್ನಪ್ಪಾ ಮಾದರ,ಕಾರ್ಯದರ್ಶಿ ಈರಣ್ಣಾ ಬುಡ್ಯಾಗೋಳ, ಸಿ ಆರ್ ಗಂಗಣ್ಣವರ,ರತ್ನಾ ಯಾದವಾಡ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಜನ ಕನ್ನಡ ಅಭಿಮಾನಿಗಳ ಭಾಗವಹಿಸಿ ನುಡಿ ಜಾತ್ರೆ ಯನ್ನು ಯಶಸ್ವಿಗೋಳಿಸಿದರು.