Belagavi

ರಸ್ತೆ ಸಂಚಾರ ನಿಯಮ, ಕಾನೂನಿನ ಅರಿವು ಮೂಡಿಸಬೇಕು: ಎಸ್‍ಪಿ ಲಕ್ಷ್ಮಣ ನಿಂಬರಗಿ

Share

ರಸ್ತೆ ಸಂಚಾರ ನಿಯಮದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ. ಭವಿಷ್ಯದ ಪ್ರಜೆಗಳಿಗೆ ಸಂಚಾರಿ ನಿಯಮ ಪಾಲನೆ ಹಾಗೂ ಕಾನೂನು ಅರಿವು ಮೂಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಬೆಳಗಾವಿ ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಕಾರ್ಯಾಲಯ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ರಸ್ತೆ ಸಂಚಾರ ನಿಯಮದ ಜೊತೆಗೆ ಕಾನೂನಿನ ನಿಯಮ ಪಾಲನೆ ಬಗ್ಗೆ ಶೈಕ್ಷಣಿಕ ಹಂತದಲ್ಲೆ ಪಠ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ವಾರಕ್ಕೆ ಒಂದು ಗಂಟೆ ವಿದ್ಯಾರ್ಥಿಗಳಿಗೆ ಸಮಯ ನಿಗದಿ ಮಾಡಬೇಕು. ಈ ಕುರಿತು ಖಾಸಗಿ ಶಾಲೆಗಳಿಗೂ ಸೂಚನೆ ನೀಡಲು ತಿಳಿಸಿದರು.

ಪ್ರತಿ 2 ತಿಂಗಳಿಗೆ ಪಾಲಕರ ಸಭೆ ಏರ್ಪಡಿಸಬೇಕು. ಪ್ರಾಥಮಿಕ , ಪ್ರೌಢ, ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಪಠ್ಯಕ್ರಮದಲ್ಲಿ ಸಂಚಾರಿ ನಿಯಮ ಅಳವಡಿಸುವುದು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗಬೇಕು. ವಾಹನ ಚಾಲನೆ ಪರವಾನಿಗೆ ಪಡೆಯಲು ಇನ್ನಷ್ಟು ಪರೀಕ್ಷೆ ನೀಡಬೇಕು, ಸಂಚಾರಿ ನಿಯಮದ ಬಗ್ಗೆ ಹೆಚ್ಚು ತಿಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಹಾಯಕ ಪೆÇಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ್.ಕೆ. ಹೆಚ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 

Tags:

error: Content is protected !!