Belagavi

ರಕ್ತದಾನ ಅತ್ಯಂತ ಪವಿತ್ರ ಕಾರ್ಯ..ಡಾ.ಆರ್.ಜಿ.ಪಾಟೀಲ್

Share

ಬೆಳಗಾವಿ: ಯುತ್ ರೆಡ್‍ಕ್ರಾಸ್, ರಾಣಿಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಯುತ್‍ರೆಡ್ ಕ್ರಾಸ್ ಘಟಕದ ಸಹಯೋಗದೊಂದಿಗೆ “Orientation Programme on youth red cross” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ಡಾ. ಆರ್.ಜಿ. ಪಾಟೀಲ ಅವರು ಸಭೆಯನ್ನು ಉದ್ದೇಶಿಸಿ ಇಂದಿನ ದಿನಮಾನದಲ್ಲಿ ರಕ್ತದಾನ ಮಾಡುವುದು ಅತ್ಯಂತ ಪವಿತ್ರಕಾರ್ಯವಾಗಿದೆ ರಕ್ತದಾನ ಮಾಡುವುಕ್ಕಿಂತ ಮೊದಲು ರಕ್ತದಾನ ಮಾಡುವ ದಾನಿಗಳು ವಹಿಸಬೇಕಾದ ಮುನ್ನಚ್ಚರಿಕೆ ಕ್ರಮಗಳ ಕುರಿತು ತಿಳಿಸಿದರು. ದಾನ ಮಾಡಿದ ರಕ್ತವನ್ನು ಯಾವ ಉದ್ದೇಶಗಳಿಗೆ ಬಳಿಸಿಕೊಳ್ಳಲಾಗುತ್ತಿದೆ ಎಂಬುದನ್ನು ತಿಳಿಸಿದರು ಜೊತೆಗೆ ರಕ್ತದಾನ ಮಾಡಿದ ನಂತರ ರಕ್ತದಾನಿಗಳಿಗಾಗುವ ಅನುಕುಲತೆಗಳ ಬಗ್ಗೆ ತಿಳಿಸಿದರು.

ಇನ್ನೂರ್ವ ಮುಖ್ಯ ಅತಿಥಿಗಳಾದ ಮತ್ತು ಸಂಪನ್ನೂಲ ವ್ಯಕ್ತಿಗಳಾದ ಡಾ. ಸುಮಂತ ಎಸ್. ಹಿರೇಮಠ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ರೆಡ್‍ಕ್ರಾಸ್ ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆಯನ್ನು ಕುರಿತು ವಿವರಿಸುತ್ತಾ ರೆಡ್‍ಕ್ರಾಸ್ ಸಂಸ್ಥೆಯು ರಕ್ತದಾನ ಜೊತೆಗೆ ಪ್ರಕೃತಿ ವಿಕೋಪ ಯುದ್ಧದ ಗಾಯಾಳುಗಳಿಗೆ ಮುಂತಾದ ಸಂದರ್ಭದಗಳಲ್ಲಿ ಸಹಾಯ ಸಹಕಾರವನ್ನು ಈ ಸಂಸ್ಥೆ ಸಲ್ಲಿಸುತ್ತದೆ ಎಂಬುದರ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಂ. ಜಯಪ್ಪ ಅವರು ರಕ್ತದಾನ ಮಾಡುವ ಮೊದಲು ಯಾವ ರೀತಿ ಮುಂಜಾಗ್ರತೆ ವಹಿಸಬೇಕು ರಕ್ತದಾನಿಗಳ ಪಟ್ಟಿಯನ್ನು ತಯಾರಿಸಿ ತುರ್ತು ಸಂದರ್ಭದಲ್ಲಿ ಈ ಪಟ್ಟಿಯಲ್ಲಿರುವ ರಕ್ತದಾನಿಗಳಿಂದ ರಕ್ತ ಪಡೆಯಲು ಸಹಾಯಕವಾಗುತ್ತದೆ ಎಂದು ನುಡಿದರು. ಇದಲ್ಲದೆ ರಕ್ತದಾನ ಮಾಡುವುದರಿಂದ ವ್ಯಕ್ತಿಗಳಲ್ಲಿ ಆರೋಗ್ಯ ಶುದ್ಧಿಕರಣ ಮಾನಸಿಕ ಶುದ್ಧಿಕರಣ ಮುಂತಾದ ಉಪಯೋಗವಾಗುತ್ತದೆ ಎಂದು ಹೇಳಿದರು.

ಯುತ್ ರೆಡ್‍ಕ್ರಾಸ್ ಘಟಕದ ಸಂಯೋಜಕರು ಶ್ರೀ ಬಾಲಾಜಿ ಡಿ ಆಳಂದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತಗೀತೆಯನ್ನು ಕು. ಸುಕನ್ಯ ಹಿರೇಮಠ ಹಾಡಿದರು, ಅತಿಥಿಗಳನ್ನು ಕು. ಸಂಗೀತಾ ಲಮಾಣಿ ಸ್ವಾಗತಿಸಿದರು, ಕಾರ್ಯಕ್ರಮವನ್ನು ನಿಕಿತಾ ನಿರೂಪಿಸಿದರು, ಕು ಮಧು ದೊಡ್ಡಕಲ್ಲಣ್ಣನವರ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದ ವರ್ಗದವರು ಉಪಸ್ಥಿತರಿದ್ದರು.

Tags:

error: Content is protected !!