ಭಾರತ ದೇಶದಲ್ಲಿ ಯೋಗಕ್ಕೆ ತನ್ನದೇ ಆದಂತಹ ಇತಿಹಾಸ ಪರಂಪರೆ ಇದೆ. ಸದ್ಯ ವಿದೇಶಿಗರಿಗೆ ಯೋಗದ ಮಹತ್ವ ಅರಿವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿಯ ಯುವಕನೊಬ್ಬ ಚೀನಾ ದೇಶದಲ್ಲಿ ಯೋಗಾಸನದ ಕೋಚ್ ಯಾಗಿ ವಿದೇಶಿಗರಿಗೆ ಯೋಗಾಸನವನ್ನು ಕಲಿಸುತ್ತಿದ್ದಾನೆ..ಅಷ್ಟಕ್ಕೂ ಆ ಯುವಕ ಯಾರು ಅಂತಿರಾ ಹಾಗಾದರೆ ಈ ಸ್ಟೋರಿಯನ್ನು ನೋಡಿ…
ಹೀಗೆ ಚೀನಾ ದೇಶದ ಜನರಿಗೆ ಯೋಗಾಸನವನ್ನು ಕಲಿಸಿ ಕೊಡುತ್ತಿರುವ ಈ ಯುವಕನ ಹೆಸರು ಕಾರ್ತಿಕ ಮಗದುಮ ಮೂಲತಹ ಚಿಕ್ಕೋಡಿ ತಾಲೂಕಿನ ಚಂದೂರ ಗ್ರಾಮದ ವನು. ಕಾರ್ತಿಕನಿಗೆ ಯೋಗ ಅಂದರೆ ಎಲ್ಲಿಲ್ಲದ ಪ್ರೀತಿ ಬಾಲ್ಯದಿಂದಲೇ ಯೋಗಾಸನವನ್ನು ಹವ್ಯಾಸವನ್ನಾಗಿ ರೂಢಿಸಿಕೊಂಡು ಯೋಗದಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಮಾಡುತ್ತಿದ್ದಾನೆ.
ಇತ್ತೀಚಿಗೆ ಚೀನಾ ದೇಶದ ಕ್ಯೂಮೀನಿಂಗ್ ನಗರದಲ್ಲಿ ಒಂದು ವರ್ಷಗಳ ಕಾಲ ಯೋಗ ಶಿಕ್ಷಕನಾಗಿ ಚೀನಾ ದೇಶದ ಜನರಿಗೆ ಯೋಗದ ಮಹತ್ವ, ಯೋಗದ ಅರಿವು ಹಾಗೂ ಯೋಗದಿಂದ ಶರೀರಕ್ಕೆ ಆಗುವ ಲಾಭಗಳನ್ನು ತಿಳಿಸಿ ಕೊಡುವ ಮೂಲಕ ಭಾರತೀಯ ಯೋಗ ಪರಂಪರೆ ಮಹತ್ವವನ್ನು ಚೀನಾ ದೇಶದ ಜನರಿಗೆ ಸಾರಿ ಹೇಳಿದ್ದಾನೆ.
ಚೀನಾ ದೇಶದಲ್ಲಿ ಒಂದು ವರ್ಷಗಳ ಕಾಲ ಕಾರ್ತಿಕನೂ ಯೋಗಶಿಕ್ಷಕನಾಗಿ ಕಾರ್ಯನಿರ್ವಹಿಸಿದ್ದಾನೆ. ಕಡಿಮೆ ವಯಸ್ಸಿನಲ್ಲಿ ಯೋಗಾಸನ ಮೈಗೂಡಿಸಿಕೊಂಡು ವಿದೇಶಗಳಲ್ಲಿ ಯೋಗಶಿಕ್ಷಕನಾಗಿ ಕಾರ್ಯನಿರ್ವಹಿಸಿದ ಕಾರ್ತಿಕ ಕಾರ್ಯ ಭಾರತ ದೇಶದ ಹೆಮ್ಮೆ ವಾಗಿದೆ.
ಇನ್ನು ಮಹಾಮಾರಿ ಕೋರೋನಾ ಸಂದರ್ಭದಲ್ಲಿ ಕಾರ್ತಿಕನೂ ಚೀನಾದಿಂದ ಭಾರತಕ್ಕೆ ವಾಪಸ್ಸಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ, ಯುವಕರಿಗೆ, ವೃದ್ಧರಿಗೆ ಯೋಗಾಸನದ ಶಿಬಿರಗಳನ್ನು ನಡೆಸುವ ಮೂಲಕ ಯೋಗದ ಮಹತ್ವವನ್ನು ಪ್ರತಿಯೊಬ್ಬರಿಗೂ ಮೂಡಿಸುವಲ್ಲಿ ಕಾರ್ತಿಕ ದಾಪುಗಾಲು ಇಡುತ್ತಿದ್ದಾನೆ. ಇಂದಿನ ಸಾಕಷ್ಟು ಯುವಕರು ದುಶ್ಚಟಕ್ಕೆ ಬಲಿಯಾಗಿ ತಮ್ಮ ಶಾರೀರಿಕ ಸ್ವಾಸ್ಥವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಇಂತಹ ಯುವಕರಲ್ಲಿ ಯೋಗದ ಮೂಲಕ ದುಶ್ಚಟಗಳನ್ನು ಬಿಡಿಸಿ ಉತ್ತಮವಾದ ಆರೋಗ್ಯವಂತ ದೇಹವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯುವಕರನ್ನು ಸಹ ಯೋಗದ ಕಡೆಗೆ ಸೆಳೆಯುವುದು ಕಾರ್ತಿಕನ ಆಶಯ ಕೂಡ ಆಗಿದೆ. ಇನ್ನೂ ಯೋಗಾ ಅಭಿಮಾನಿಗಳು ಹಾಗೂ ಯೋಗ ಪಟುಗಳಾದ ಸುನಿಲ ಪವಾರ ಅವರು ಇನ್ ನ್ಯೂಸ ಜೊತೆ ಮಾತನಾಡಿ ಕಾರ್ತಿಕನ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗದ ಸಾಧನೆ ಕುರಿತು ಕೊಂಡಾಡಿದ್ದರು.
ಒಟ್ಟಿನಲ್ಲಿ ಚಂದೂರ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿ… ದೂರದ ಚೀನಾ ದೇಶದಲ್ಲಿ ವಿದೇಶಿಯರಿಗೆ ಯೋಗಶಿಕ್ಷಕನಾಗಿ ಕಾರ್ಯನಿರ್ವಹಿಸಿದ ಕಾರ್ತಿಕ ಮಗದುಮ್ಮ ನ ಕಾರ್ಯಕ್ಕೆ ಮೆಚ್ಚಲೇಬೇಕು