ಹುಕ್ಕೇರಿ ತಾಲೂಕಿನ10ನೇ ಕನ್ನಡ ಸಾಹಿತ್ಯ ಪರಿಷತ್ತು ಯರನಾಳ ಗ್ರಾಮದ ಶ್ರೀ ಬ್ರಹ್ಮಾನಂದ ಅಜ್ಜನವರ ಕಾಳಿಕಾದೇವಿ ದೇವಸ್ಥಾನದ ರಾಜಾ ಲಖಮಗೌಡಾ ಸರದೇಸಾಯಿ ವೇದಿಕೆ ಯಲ್ಲಿ ಜರುಗಿತು.
ಯರನಾಳದ ಬ್ರಹ್ಮಾನಂದ ಅಜ್ಜನವರ ದಿವ್ಯ ಸಾನಿದ್ಯದಲ್ಲಿ ಚಿಕ್ಕೋಡಿಯ ಚರಮೂರ್ತಿ ಮಹಾಸ್ವಾಮಿಗಳು , ಹತ್ತರಗಿಯ ಗುರುಸಿದ್ದ ಮಹಾಸ್ವಾಮಿಗಳು ಹಾಗೂ ಹುಕ್ಕೇರಿ ಹಿರೇಮಠ ದ ಚಂದ್ರಶೇಖರ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಿದ ಸಮ್ಮೇಳನ ವನ್ನು ಧಾರವಾಡ ವಿಶ್ವವಿದ್ಯಾಲಯ ಕುಲಪತಿ ಡಾ, ಕೆ ಬಿ ಗುಡಸಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತ ಅದ್ಯಕ್ಷ ಪ್ರಕಾಶ ದೇಶಪಾಂಡೆ ಶ್ರೀಗಳನ್ನು ಮತ್ತು ಗಣ್ಯರನ್ನು ,ಸಾಹಿತಿಗಳನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಹುಕ್ಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ದೇಶದಲ್ಲಿಯೇ ಪ್ರಥಮ ಬಾರಿಗೆ ನಾಡಿನ ಹಿರಿಯ ಖ್ಯಾತ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪಡೆದ ಡಾ, ಚಂದ್ರಶೇಖರ ಕಮ್ಮಾರವರ ಹುಟ್ಟೂರಾದ ಘೋಡಗೇರಿ ಗ್ರಾಮದಲ್ಲಿ ಸಾಹಿತ್ಯ ಭವನ ಕಟ್ಟುವ ಮೂಲಕ ಹುಕ್ಕೇರಿ ಕನ್ನಡ ಸಾಹಿತ್ಯ ಪರಿಷತ್ತ ಘಟಕ ಕಾರ್ಯ ನಿರ್ವಹಿಸುತ್ತಿದೆ ಎಂದರು.
ವೇದಿಕೆ ಮೇಲೆ ಸಮ್ಮೇಳನದ ಸರ್ವಾದ್ಯಕ್ಷ ಡಾ, ರಾಜಶೇಕರ ಇಚ್ಚಂಗಿ, ಜಿಲ್ಲಾ ಅದ್ಯಕ್ಷೆ ಶ್ರೀಮತಿ ಮಂಗಲಾ ಮೆಟ್ಟಗುಡ್ಡ, ಮಾಜಿ ಸಚಿವ ಶಶಿಕಾಂತ ನಾಯಿಕ, ಎಲ್ ವಿ ಪಾಟೀಲ, ಬಿ ಇ ಓ ಮೋಹನ ದಂಡಿನ, ಕಾರ್ಯದರ್ಶಿ ಶಿವಾನಂದ ಗುಂಡಾಳಿ, ಬಾಬು ನಾಯಿಕ ಉಪಸ್ಥಿತರಿದ್ದರು.
ಮಾದ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷೆ ಗಡಿನಾಡಿನ ಕನ್ನಡಿಗರು ಅನ್ಯ ಭಾಷೆ ಜನರ ಜೋತೆ ಅನ್ನೋನ್ಯವಾಗಿ ಜಿವನ ಸಾಗಿಸುತ್ತಿದ್ದಾರೆ ಅವರಗೆ ಯಾವದೆ ಭಾಷಾ ಗೊಂದಲ ಇಲ್ಲಾ ಕೇವಲ ರಾಜಕಾರಣಿಗಳು ಮಾತ್ರ ಗಡಿ ವಿಷಯವನ್ನು ಜಿವಂತ ಇಡುವ ಕೇಲಸ ಮಾಡುತ್ತಿವೆ ಎಂದರು .
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ವಿವಿಧ ತಾಲೂಕುಗಳ ಕ ಸಾ ಪ ಅದ್ಯಕ್ಷರು ,ಸಾಹಿತಿಗಳು , ಕನ್ನಡಾಭಿಮಾನಿಗಳು ಹೇಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ನಂತರ ವಿವಿಧ ಸಾಹಿತಿಗಳಿಂದ ಗೋಷ್ಠಿ ಗಳು ಜರುಗಿದವು.