Chikkodi

ಯಡೂರಿನ ಶ್ರೀವೀರಭದ್ರೇಶ್ವರ ಜಾತ್ರೆ ಹಿನ್ನೆಲೆ ಈ ಬಾರಿ ಸಾಂಕೇತಿಕ ಮಹಾರಥೋತ್ಸವ ಶ್ರೀಶೈಲ ಜಗದ್ಗುರುಗಳಿಂದ ಸ್ಪಷ್ಟನೆ

Share

ಕೋವಿಡ್ ಹಿನ್ನಲೆಯಲ್ಲಿ ಯಡೂರಿನ ಶ್ರಿ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಸರ್ಕಾರ ನಿಯಮದಂತೆ ಸಾಂಕೇತಿಕ ಮಹಾರಥೋತ್ಸವ ಜರುಗುಲಿದೆ ಎಂದು ಶ್ರಿಶೈಲ್ ಜದ್ಗುರುಗಳು ಸ್ಪಷ್ಟ ಪಡಿಸಿದಾರೆ‌.

ಚಿಕ್ಕೋಡಿ ತಾಲೂಕಿನ ಯಡೂರಿನ ಶ್ರಿಕಾಡಸಿದ್ದೆಶ್ವರ ಮಠದಲ್ಲಿ ಇನ್ ನ್ಯೂಸ ಜೋತೆ ಮಾತನಾಡಿ ಯಡೂರಿ‌ನ ಶ್ರಿಕಾಡಸಿದ್ದೆಶ್ವರ ಮಠ, ಶ್ರಿವೀರಭದ್ರಶ್ವೆರ ದೇವಸ್ಥಾನದ ಧರ್ಮಾಧಿಕಾರಿಗಳಾದ ಶ್ರಿಶೈಲ್ ಜದ್ಗುರುಗಳು ಮಹಾಮಾರಿ‌ ಕೊರೋನಾ ಹಿನ್ನೆಲೆಯಲ್ಲಿ ಯಡೂರಿನ ಐತಿಹಾಸಿಕ ಶ್ರಿವೀರಭದ್ರಶ್ವೆರ ಜಾತ್ರಾಮಹೋತ್ಸವನ್ನು ಸರಳವಾಗಿ ಆಚರಿಸಲು ತಿರ್ಮಾನಿಸಲಾಗಿದೆ.ಬಿಲ್ವಾರ್ಚಾನೆ,ಆಯಾಚಾರ,ಲಿಂಗದಿಕ್ಷೆ,ಮಹಾಪ್ರಸಾದ,ದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ನೀಡಲಾಗಿದೆ.

ಇನ್ನೂ ಬಹುನಿರೀಕ್ಷಿತ ಶ್ರಿ ವೀರಭದ್ರೇಶ್ವರ ಮಹಾರಥೋತ್ಸವನ್ನು ಧಾರ್ಮಿಕ ವಿಧಿಯಂತೆ ಶಿಷ್ಟಾಚಾರ ಅನುಗುಣವಾಗಿ ಕಡಿಮೆ ಜನರ ಸಮ್ಮುಖದಲ್ಲಿ ಫೆಬ್ರುವರಿ 12 ರಂದು ಸಾಯಂಕಾಲದ ಸಮಯದಲ್ಲಿ ಮಹಾರಥೋತ್ಸವ ಜರುಗುಲಿದೆ. ಎಂದು ಶ್ರಿಶೈಲ್ ಜದ್ಗುರುಗಳು ಸ್ಪಷ್ಟಪಡಿಸಿದರು.ಜಾತ್ರಾಮಹೋತ್ಸವಕ್ಕೆ ತಾಲೂಕಾಡಳಿತದಿಂದ ಅನುಮತಿ ಸಿಕ್ಕಿದೆ.ಭಕ್ತರು ಮಾಸ್ಕ ಧರಿಸಿ,ಸಾಮಾಜಿಕ ಅಂತರ ಕಾಯ್ದು ,ಸೈನಿಟಜರ ಬಳಸಿ ಶಾಂತತೆಯಿಂದ ಜಾತ್ರೆಯಲ್ಲಿ ಪಾಲ್ಗೊಂಡು ಶ್ರಿ ವೀರಭದ್ರೇಶ್ವರ ಕೃಪೆಗೆ ಪಾತ್ರರಾಗಬೆಕೆಂದು ಶ್ರಿಶೈಲ್ ಜದ್ಗುರುಗಳು ತಿಳಿಸಿದರು.

ಈ ಸಂಧರ್ಭದಲ್ಲಿ ಅಡವಯ್ಯ ಅರಳಿಕಟ್ಟಿಮಠ,ಮಲ್ಲಪ್ಪ ಸಿಂಧೂರ,ಬಸವರಾಜ ಚೋಂಚನ್ನವರ ಸೇರಿದಂತೆ ‌ಮುಂತಾದವರು ಉಪಸ್ಥಿತರಿದ್ದರು..

Tags:

error: Content is protected !!