ರಾಯಬಾಗ ತಾಲೂಕಿನ ಮುಗಳಖೋಡ ಬೃಹನ್ಮಠದಲ್ಲಿ ಸದ್ಗುರು ಶ್ರೀಯಲ್ಲಾಲಿಂಗ ಮಹಾಪ್ರಭುಗಳ ೩೫ನೇ ಪುಣ್ಯಾರಾಧನೆ ವಿಜೃಂಭಣೆಯಿAದ ನಡೆಯಿತು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಬೃಹನ್ಮಠದಲ್ಲಿ ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳವರ ೩೫ನೆಯ ಪುಣ್ಯಾರಾಧನೆ ಏರ್ಪಡಿಸಲಾಗಿತ್ತು.
ಈ ವೇಳೆ ಭಕ್ತರನ್ನು ಉದ್ದೇಶಿಸಿ ಶ್ರೀ ಯಲ್ಲಾಲಿಂಗ ಮಹಾಪ್ರಭು ಮಾತನಾಡಿ, ಶ್ರೀಮಠದಲ್ಲಿ ಆಗಮಿಸುವ ಭಕ್ತರ ಮನಸ್ಸು ಪರಿಶುದ್ಧವಾಗಿರಬೇಕು. ಶ್ರೀಮಠಕ್ಕೆ ತಪಸ್ಸು ಮಾಡಲಿಕೆ ಬರಬೇಕು. ತಪಾಸಣೆ ಮಾಡಲಿಕ್ಕೆ ಬಂದರೆ ನಪಾಸು ಆಗಿ ಹೋಗ್ತಾರೆ. ಮುಂದೆ ಬರುವ ಕೆಲವೊಂದಿಷ್ಟು ದಿನಗಳು ಕಠಿಣವಾಗಿವೆ. ರೈತರಿಗೆ ಈ ವರ್ಷ ಹರ್ಷದ ವರ್ಷವಾಗುತ್ತದೆ ಎಂದು ಆಶೀರ್ವಚನ ನೀಡಿದರು.
ಮಂಗಳವಾರ ಬೆಳಗ್ಗೆ ಲಿಂ.ಸದ್ಗುರು ಯಲ್ಲಾಲಿಂಗ ಮಹಾಪ್ರಭುಗಳ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ವಿಶೇಷ ಪೂಜೆ, ಪುಷ್ಪಾರ್ಚನೆ ಹಾಗೂ ಮಹಾಮಂಗಳಾರತಿಯೊ0ದಿಗೆ ಕಲಬುರಗಿ ಮಹಾದಾಸೋಹಿ ಶರಣಬಸವೇಶ್ವರರ ಪುರಾಣ ಮಂಗಲಗೊ0ಡಿತು. ಶ್ರೀಗಳಿಗೆ ಸದ್ಭಕ್ತರಿಂದ ತುಲಾಭಾರ ಸೇವೆ, ಪಾದಪೂಜೆ ಸುವರ್ಣ ಕಿರೀಟಧಾರಣೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕುಡಚಿ ಮತ ಕ್ಷೇತ್ರದ ಶಾಸಕ ಸನ್ಮಾನ್ಯ ಶ್ರೀ ಪಿ ರಾಜೀವ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವರಾದ ಶಶಿಕಲಾ ಜೊಲ್ಲೆ, ಸಾಧು ಶರಣರು, ಸಂತರು, ಕರ್ನಾಟಕ, ಮಹಾರಾಷ್ಟ್ರ, ಗೋವಾ ಆಂಧ್ರ ಹಾಗೂ ತಮಿಳುನಾಡು ರಾಜ್ಯಗಳಿಗೆ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.