Davanagere

ಮಾರ್ಚ್ ಮೊದಲ ವಾರ ರಾಜ್ಯ ಬಜೆಟ್: ಸಿಎಂ ಯಡಿಯೂರಪ್ಪ ಸುಳಿವು

Share

ರಾಜ್ಯ ಬಜೆಟ್ ತಯಾರಿ ನಡೆದಿದೆ. ಎಲ್ಲ ಸಚಿವರು, ಶಾಸಕರು, ತಜ್ಞರೊಂದಿಗೆ ಸಮಾಲೋಚನೆ ನಡೆದಿದ್ದು, ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಹರಿಹರ ಬಳಿಯ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ, ಗುರುಪೀಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ರಾಜ್ಯ ಸರಕಾರದ್ದು ಕೊರತೆ ಬಜೆಟ್ಟೋ, ಬೆಳವಣಿಗೆಯ ಬಜೆಟ್ಟೋ ಅನ್ನುವುದನ್ನು ಕಾದು ನೋಡಿ. 6-7 ತಿಂಗಳಿಂದ ತೆರಿಗೆ ಸಂಗ್ರಹ ಗಣನೀಯವಾಗಿ ಕುಸಿದಿತ್ತು. ಈಗ ಪರವಾಗಿಲ್ಲ.

ನಮ್ಮ ಇತಿಮಿತಿಗಳಲ್ಲಿ ರಾಜ್ಯದ ಹಿತಕ್ಕೆ ಏನು ಸಾಧ್ಯವೋ ಅದನ್ನೆಲ್ಲ ಮಾಡುತ್ತೇವೆ. ಮಾರ್ಚ್‍ನಲ್ಲಿ ಬಜೆಟ್ ಮಂಡಿಸಲಾಗುವುದು. ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಸಚಿವರು, ಶಾಸಕರು ಇದ್ದರು.

Tags:

error: Content is protected !!