ತೀವ್ರ ಜಿದ್ದಾಜಿದ್ದಿನ ಕಣವಾಗಿ ಬಿಂಬಿತವಾಗಿದ್ದ ಮಾಂಜರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಾಂಡುರಂಗ ಮಾನೆ ಹಾಗೂ ಉಪಾಧ್ಯಕ್ಷರಾಗಿ ಸಪುರಾ ಜಾಕೀರ್ ತರಾಳಯವರು ಆಯ್ಕೆಯಾದರು.

ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇವತ್ತು ಚುನಾವಣೆ ಜರುಗಿತು.
27 ಸದಸ್ಯ ಬಲವನ್ನು ಹೊಂದಿರುವಂತಹ ಮಾಂಜರಿ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪರ 15 ಸದಸ್ಯರು ಆಯ್ಕೆಯಾದರೆ ಇನ್ನೂ ಬಿಜೆಪಿ ಪರ 12 ಸದಸ್ಯರು ಆಯ್ಕೆಯಾಗಿದ್ದರು ಇವತ್ತು ನಡೆದ ಚುನಾವಣೆಯಲ್ಲಿ
ಕಾಂಗ್ರೆಸ್ ಪಕ್ಷದ ಪರ ಅಧ್ಯಕ್ಷ ಸ್ಥಾನಕ್ಕೆ ಪಾಂಡುರಂಗ ದತ್ತು ಮಾನೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಪೂರ ಜಾಕೀರ್ ತರಾಳ ಅವರು ನಾಮಪತ್ರವನ್ನು ಸಲ್ಲಿಸಿದರು. ಬಿಜೆಪಿಪರ ಅಧ್ಯಕ್ಷ ಸ್ಥಾನಕ್ಕೆ ಜ್ಞಾನೇಶ್ವರ ಪಾಟೋಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅನಿತಾ ಅನಿಲ ವಗ್ಗೆಯವರು ನಾಮಪತ್ರವನ್ನು ಸಲ್ಲಿಸಿದರು.
ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದ ಪಾಂಡುರಂಗ ಮಾನೆವರು 15 ಮತಗಳನ್ನು ಪಡೆದುಕೊಂಡು ಅಧ್ಯಕ್ಷರಾಗಿ ಚುನಾಯಿತರಾದರೆ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಪರ ಸಪೂರ ಜಾಕೀರ್ ತರಾಳ ಅವರು 15 ಮತಗಳನ್ನು ಪಡೆದುಕೊಂಡು ಉಪಾಧ್ಯಕ್ಷರಾಗಿ ಚುನಾಯಿತರಾದರು. ಚುನಾವಣೆ ಫಲಿತಾಂಶ ಘೋಷಣೆಯ ನಂತರ ಕಾಂಗ್ರೆಸ್ ಪರ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಗುಲಾಲು ಎರಚಿ ಸಂಭ್ರಮಿಸಿದರು.
ಇನ್ನೂ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಪಾಂಡುರಂಗ ಮಾನೆಯವರು ಮಾಧ್ಯಮಗಳ ಜೊತೆ ಮಾತನಾಡಿ ಶಾಸಕರಾದ ಗಣೇಶ ಹುಕ್ಕೇರಿ ಹಾಗೂ ಮಾಜಿ ಸಚಿವರಾದ ಪ್ರಕಾಶ ಹುಕ್ಕೇರಿಯವರು ಆಶೀರ್ವಾದದಿಂದ ಮಾಂಜರಿ ಗ್ರಾಮದ ಜನರ ಆಶಿವಾರ್ದದಿಂದ ನಮ್ಮ ಕಾಂಗ್ರೆಸ್ ಪಕ್ಷದ ಸದ್ಯಸರ ಸಹಕಾರದಿಂದ ಇವತ್ತು ನಾನು ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಮುಂಬರುವ ದಿನಗಳಲ್ಲಿ ಮಾಂಜರಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯನ್ನು ಕೈಗೊಂಡು ಮಾಂಜರಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಬೇಕೆನ್ನುವುದು ನನ್ನ ಗುರಿಯಾಗಿದೆ. ಎಂದು ನೂತನ ಅಧ್ಯಕ್ಷ ಪಾಂಡುರಂಗ ಮಾನೆಯವರು ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.
ನಂತರ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಪೂರ ಜಾಕಿರ್ ತರಾಳ ಅವರು ಮಾತನಾಡಿ ಮಾಂಜರಿ ಗ್ರಾಮದ ಹಿರಿಯ ಮುಖಂಡರಾದ ಪಾಂಡುರಂಗ ಮಾನೆಯವರ ಆಶೀರ್ವಾದದಿಂದ ಹಾಗೂ ಸ್ಥಳೀಯ ಶಾಸಕರಾದ ಗಣೇಶ ಹುಕ್ಕೇರಿಯವರ ಹಾಗೂ ಪ್ರಕಾಶ ಹುಕ್ಕೇರಿಯವರ ಸಹಕಾರದಿಂದ ಇವತ್ತು ಉಪಾಧ್ಯಕ್ಷ ರಾಗಿ ಚುನಾಯಿತರಾಗಿದ್ದೆವೆ. ನಮ್ಮ ಹಿರಿಯರ ಮಾರ್ಗದರ್ಶನದಂತೆ ಮಾಂಜರಿ ಗ್ರಾಮದಲ್ಲಿ ಹಲವು ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನರ ಋಣವನ್ನು ತೀರಿಸುವುದು ನಮ್ಮ ಗುರಿಯಾಗಿದೆ ಸಪುರಾ ಎಂದು ಜಾಕೀರ್ ತರಾಳ ಅವರು ತಿಳಿಸಿದರು.
ಎಸ್ ಎಸ್ ಹಿದಿಹೋಳಿಯವರು ಚುನಾವಣೆಯ ಅಧಿಕಾಯಾಗಿ ಕಾರ್ಯನಿರ್ವಹಿಸಿದರು.ಈ ಸಂಧರ್ಭದಲ್ಲಿ ಮಾಂಜರಿ ಗ್ರಾ ಪಂ ಸದಸ್ಯರು ಸೇರಿದಂತೆ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.