Events

ಮಹಾರಾಷ್ಟ್ರದ ಕುಂಭೋಜ್‍ನಲ್ಲಿ ಉಗಾರ ಬುದ್ರುಕ ಶ್ರೀಪದ್ಮಾವತಿ ದೇವಿಯ 3.5 ಕೆ.ಜಿ ಚಿನ್ನದ ಮೂರ್ತಿಯ ಭವ್ಯ ಮೆರವಣಿಗೆ

Share

ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ಗ್ರಾಮದೇವತೆ ಶ್ರೀ ಪದ್ಮಾವತಿ ದೇವಿ ಮಂದಿರದಲ್ಲಿ ಪ್ರತಿಷ್ಠಾಪಿಸುವ 3.5 ಕೆಜಿ ತೂಕದ ಚಿನ್ನದ ಮೂರ್ತಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಹಾತಕಲಂಗಡೆ ತಾಲ್ಲೂಕಿನ ಕುಂಭೋಜ ಪಟ್ಟಣದಲ್ಲಿ ದೇವಿ ಮೂರ್ತಿಗೆ ಅದ್ಧೂರಿಯಾಗಿ ಭಕ್ತಿ-ಭಾವದಿಂದ ಸ್ವಾಗತಿಸಿ ಭವ್ಯ ಮೆರವಣಿಗೆ ಮಾಡಲಾಯಿತು.

ಮಂಗಳವಾರ ಉಗಾರ ಬುದ್ರುಕ ಗ್ರಾಮದ ಪದ್ಮಾವತಿ ಮಂದಿರದ ಮುಖ್ಯಸ್ಥರಾದ ಶೀತಲಗೌಡ ಪಾಟೀಲ ಹಾಗೂ ಮಂದಿರದ ಸಮಿತಿ ಸದಸ್ಯರು ಕೊಲ್ಹಾಪುರ ಜಿಲ್ಲೆಯ ಕುಂಭೋಜ್ ಪಟ್ಟಣಕ್ಕೆ ಮೂರ್ತಿಯೊಂದಿಗೆ ತೆರಳಿದ್ದರು. ಅಲ್ಲಿಯ ಜೈನ ಸಮಾಜದ ಮುಖಂಡರು, ವೀರಸೇವಾದಳ ಹಾಗೂ ಅನೇಕ ಮಹಿಳಾ ಸದ್ಭಕ್ತರು ಅದ್ಧೂರಿಯಾಗಿ ಮೆರವಣಿಗೆ ಹಮ್ಮಿಕೊಂಡು ಭಕ್ತಿ-ಭಾವದಿಂದ ಪೂಜೆ ಸಲ್ಲಿಸಲಾಯಿತು.

ಉಗಾರದ ಶ್ರೀ ಪದ್ಮಾವತಿ ಮಂದಿರದ ಮುಖ್ಯಸ್ಥ ಶೀತಲಗೌಡ ಪಾಟೀಲ ಕುಂಭೋಜದಲ್ಲಿ ಮಾತನಾಡಿ, ತಾಯಿ ಪದ್ಮಾವತಿ ದೇವಿ ವಿಶೇಷ ಪವಾಡವಿದ್ದು ಸುಮಾರು 400 ವರ್ಷ ಪೂರ್ವದಲ್ಲಿ ಕುಂಭೋಜ ಪಟ್ಟಣದ ಗೌಡರ ಮನೆತನದ ಮಗಳನ್ನು ಉಗಾರದ ಗೌಡರ ಮನೆತನದಲ್ಲಿ ಮದುವೆವಾಗಿದ್ದರು. ಅವರು ಪದ್ಮಾವತಿ ದೇವಿ ಸದ್ಭಕ್ತರಾಗಿದ್ದರು. ಆಗಿಂದ ಉಗಾರದ ಪದ್ಮಾವತಿ ಮಂದಿರ ಸ್ಥಾಪಿಸಿ ಅಲ್ಲಿಗೆ ನಿರಂತರ ಪೂಜೆ ನೆರವೇರುತ್ತದೆ. ಈಗ ಎಲ್ಲ ಸದ್ಭಕ್ತರು ದಾನವಾಗಿ ನೀಡಿದ ಚಿನ್ನ, ಹಣ ಒಗ್ಗೂಡಿಸಿ 3.5 ಕೆಜಿ ತೂಕಿನ ಚಿನ್ನದ ಮೂರ್ತಿ ನಿರ್ಮಿಸಲಾಗಿದೆ. ಫೆ.15ರಂದು ಬೆಳಿಗ್ಗೆ 10 ಗಂಟೆಗೆ ಉಗಾರ ಗ್ರಾಮ ಪ್ರವೇಶಿಸಿ ಭಟ್ಟಾರಕ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮೂರ್ತಿ ಸ್ಥಾಪನೆಗೊಳ್ಳಲಿದೆ. ಸದ್ಭಕ್ತರು ಪಾಲ್ಗೊಂಡು ದೇವಿ ಮೂರ್ತಿ ದರ್ಶನ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಕುಂಭೋಜ ಪಟ್ಟಣದಲ್ಲಿ ಜೈನ ಶ್ರಾವಕ-ಶ್ರಾವಿಕೆಯರು ಒಂದುಗೂಡಿ ಬಸ್ ನಿಲ್ದಾಣದಿಂದ ಶಾಂತಿಸಾಗರ ಜೈನ ಮಂದಿರವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶಾಂತಿಸಾಗರ ಝಾಂಜ್ ಪಥಕ ಹಾಗೂ ಇತರ ವಾದ್ಯದೊಂದಿಗೆ ಮೆರವಣಿಗೆ ಹಮ್ಮಿಕೊಂಡು ಭಕ್ತಿಭಾವದಿಂದ ಮೂರ್ತಿಗೆ ಸ್ವಾಗತಿಸಿದರು. ಈ ವೇಳೆ ಉಗಾರದ ಪದ್ಮಾವತಿ ಮಂದಿರದ ಕಮೀಟಿ ಸದಸ್ಯರು ಪಾಲ್ಗೊಂಡಿದ್ದರು.

ಸುಕುಮಾರ ಬನ್ನೂರೆ, ಇನ್ ನ್ಯೂಸ್, ಕಾಗವಾಡ.

 

Tags:

error: Content is protected !!