Belagavi

ಮಚ್ಛೆ-ಹಲಗಾ ಬೈಪಾಸ್ ವಿರೋಧಿಸಿ ಜೆಸಿಬಿ ಮುಂದೆ ಮಲಗಿ ರೈತರ ಆಕ್ರೋಶ

Share

ಮಚ್ಛೆ-ಹಲಗಾ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಬಂದಿದ್ದ ಅಧಿಕಾರಿಗಳಿಗೆ ರೈತ ಮುಖಂಡರು ತಿರುಗೇಟು ನೀಡಿದ್ದಾರೆ. ಕೆಲಸಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಕೂಡ ಕೆಲಸ ಆರಂಭಿಸಲು ಅದೇಹೇಗೆ ಬಂದಿದ್ದಿರಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಹೌದು ಮಚ್ಛೆ-ಹಲಗಾ ಬೈಪಾಸ್ ವಿರೋಧಿಸಿ ಇಲ್ಲಿನ ರೈತರು ಬಹಳಷ್ಟು ಹೋರಾಟ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಾಮಗಾರಿಗೆ ಹೈಕೋರ್ಟ್‍ನಿಂದ ರೈತರು ತಡೆಯಾಜ್ಞೆ ಕೂಡ ತಂದಿದ್ದರು. ಇಷ್ಟಿದ್ದರೂ ಕೂಡ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜೆಸಿಬಿ, ಯಂತ್ರೋಪಕರಣಗಳ ಸಮೇತ ಕೆಲಸಕ್ಕೆ ಆಗಮಿಸುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನೀವು ಯಾರನ್ನು ಕೇಳಿ ಕೆಲಸಕ್ಕೆ ಬಂದಿದ್ದಿರಿ. ಕೋರ್ಟ್ ತಡೆಯಾಜ್ಞೆ ಇರೋದು ನಿಮಗೆ ಗೊತ್ತಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ನಾವು ಕೋರ್ಟ್ ಆರ್ಡರ್ ತೆಗೆದುಕೊಂಡು ಬಂದಿದ್ದೇವೆ ಎಂದು ಹೇಳಿದ ಅಧಿಕಾರಿಗಳು ಆರ್ಡರ್ ಕಾಪಿ ತೋರಿಸಿ ಎಂದು ರೈತರು ಪಟ್ಟು ಹಿಡಿಯುತ್ತಿದ್ದಂತೆ ತಬ್ಬಿಬ್ಬಾದ ಅಧಿಕಾರಿಗಳು ಎಸಿ ಅವರ ಸೂಚನೆಯಂತೆ ಕೆಲಸ ಆರಂಭಿಸಲು ಬಂದಿದ್ದೇವೆ ಎಂದರು. ಈ ವೇಳೆ ಅಜ್ಜಿಯೊಬ್ಬರು ನೀವು ಕೆಲಸ ಆರಂಭಿಸುವುದಾದ್ರೆ ನನ್ನ ಮಗ ಹಾಗೂ ನನ್ನನ್ನು ಜೆಸಿಬಿಯಿಂದ ಹಗೆ ಒಳಗೆ ಹಾಕಿ ಹೋಗ್ರಿ, ಎರಡು ವರ್ಷದಿಂದ ಸಾಕಷ್ಟು ನಷ್ಟ ಅನುಭವಿಸಿದ್ದೇವೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದಾದ ಬಳಿಕ ಜೆಸಿಬಿ ಮುಂದೆ ಮಲಗಿದ ರೈತರು ನಮ್ಮ ಮೇಲೆ ಜೆಸಿಬಿ ಹಾಯಿಸಿ ನೀವು ಕೆಲಸ ಆರಂಭಿಸಿ ಎಂದು ರಸ್ತೆ ಮೇಲೆಯೇ ಹೊರಳಾಡಿ, ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು.
: ಒಟ್ಟಾರೆ ಕೋರ್ಟ್ ಆರ್ಡರ್ ಇದೇ ಎಂದು ಹೇಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆರ್ಡರ್ ಕಾಪಿ ಮಾತ್ರ ತೋರಿಸುತ್ತಿಲ್ಲ. ಅಷ್ಟೇ ಅಲ್ಲದೇ ಯಾವುದೇ ಕಾರಣಕ್ಕೂ, ನಮ್ಮ ಜೀವ ಹೋದರೂ ಕೂಡ ಕೆಲಸ ಆರಂಭಿಸಲು ಅವಕಾಶ ಕೊಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿರುವ ದೃಶ್ಯ ಕಂಡು ಬಂತು.

 

Tags:

error: Content is protected !!