Kagawad

ಮಂಗಸೂಳಿ ಗ್ರಾಮ ಪಂಚಾಯತಿಯಲ್ಲಿ ರವೀಂದ್ರ ಪೂಜಾರಿ ಇವರ ಗುಂಪಿಗೆ ಜಯ

Share

ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಥಣಿ ತಾಲೂಕಾ ಎಪಿಎಂಸಿ ಮಾಜಿ ಅಧ್ಯಕ್ಷ ರವೀಂದ್ರ ಪೂಜಾರಿ ಇವರ ಪ್ಯಾನಲಿನ ಸರೀತಾ ಧನಾಜಿ ಪಾಟೀಲ(ಇನಾಮದಾರ) ಇವರು ಅಧ್ಯಕ್ಷರಾಗಿ ಮತ್ತು ಭಾರತಿ ಮಧುಕರ ಭಗತ್(ಲೋಕುರ) ಇವರು ಉಪಾಧ್ಯಕ್ಷರಾಗಿ ಚುನಾಯಿತಗೊಂಡರು.

ಸೋಮವಾರ ರಂದು ಮಂಗಸೂಳಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಪ್ರಕ್ರೀಯೆ ಜರುಗಿತು. ಕಾಗವಾಡ ಬಿಇಓ ಎಂ.ಆರ್.ಮುಂಜೆ ಇವರು ಫಲಿತಾಂಶ ಘೋಷಣೆ ಮಾಡಿದರು. ಸಹಾಯಕರಾಗಿ ಪಿಡಿಓ ಎಂ.ಆರ್.ಹಿರೇಮಠ, ಕಾರ್ಯದರ್ಶಿ ಎಸ್.ಬಿ.ಸೂರ್ಯವಂಶಿ ಕಾರ್ಯನಿರ್ವಹಿಸಿದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎರಡೆರಡು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣೆ ಜರುಗಿತು. ಮಂಗಸುಳಿ ಗ್ರಾಮ ಪಂಚಾಯತಿಗೆ ಒಟ್ಟು 40 ಸದಸ್ಯರಿದ್ದು, ಇದರ ಪೈಕಿ ಲೋಕುರದ ಸದಸ್ಯ ಶಂಕರ ಮಮದಾಪುರೆ ಇವರ ನಿಧನದ ನಂತರ 39 ಸದಸ್ಯರ ಸಂಖ್ಯಾಬಲ ಹೊಂದಿದೆ. ಅಧ್ಯಕ್ಷ ಸ್ಥಾನಕ್ಕೆ ಸರಿತಾ ಪಾಟೀಲ ಹಾಗೂ ಮಾಧುರಿ ಮಾಳಿ ನಾಮಪತ್ರ ಸಲ್ಲಿಸಿದ್ದರು. ಮತದಾನ ಪ್ರಕ್ರೀಯೆ ಜರುಗಿದ್ದರಿಂದ ಅಧ್ಯಕ್ಷ ಸ್ಥಾನಕ್ಕಾಗಿ ಸರೀತಾ ಪಾಟೀಲ 25 ಮತಗಳನ್ನು ಪಡದರೆ ಉಪಾಧ್ಯಕ್ಷ ಸ್ಥಾನಕ್ಕಾಗಿ ಭಾರತಿ ಮಾರುತಿ ಭಗತ್ 26 ಮತಗಳನ್ನು ಪಡೆದು ವಿಜೇತರಾದರು. ಇವರ ವಿರುದ್ಧವಾಗಿ ಮಾಧುರಿ ಮಾಳಿ 14 ಮತಗಳನ್ನು, ಲಕ್ಷ್ಮೀ ಸಿಂಗಾಡೆ 13 ಮತಗಳನ್ನು ಪಡೆದುಕೊಂಡು ಪರಾಭುತರಾದರು.

ಗ್ರಾಮದ ಮುಖಂಡರು, ಅಥಣಿ ಎಪಿಎಂಸಿ ಮಾಜಿ ಸಂಚಾಲಕ ರವೀಂದ್ರ ಪುಜಾರಿ ಮಾತನಾಡಿ, ಗ್ರಾಮ ಮಟ್ಟದಲ್ಲಿ ಚುನಾವಣೆಗಳು ಆಗಬಾದರು. ಎಲ್ಲ ಪಕ್ಷದ ಮುಖಂಡರು ಕೂಡಿ ಒಮ್ಮತದ ಸದಸ್ಯರುಗಳನ್ನು ಆಯ್ಕೆಮಾಡಿ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು. ಆದರೆ ಇಂದಿನ ದಿನಮಾನಗಳಲ್ಲಿ ಅಪೇಕ್ಷಿತರ ಸಂಖ್ಯೆ ಹೆಚ್ಚಾಗಿರುವದರಿಂದ ಚುನಾವಣೆ ಅನಿವಾರ್ಯವಾಯಿತು. ಆದರೆ ನನ್ನ ಮೇಲೆ ಹಾಗೂ ನಮ್ಮೆಲ್ಲ ಮುಖಂಡರು ಹಾಗೂ ಸದಸ್ಯರುಗಳ ಮೇಲೆ ವಿಶ್ವಾಸವಿಟ್ಟು ಆಯ್ಕೆಮಾಡಿ ಕಳುಹಿಸಿದ್ದಕ್ಕೆ ಇಂದು ನಮ್ಮವರೆ ಅದ್ಯಕ್ಷ ಉಪಾದ್ಯಕ್ಷರಾಗಿದ್ದಾರೆ. ಎಲ್ಲರು ಕೂಡಿಕೊಂಡು ಪಕ್ಷಬೇಧ ಮರೆತು ಗ್ರಾಮದ ಅಭಿವೃದ್ಧಿಯತ್ತ ಗಮನ ಹರಿಸೋಣ ಎಂದರು.

ಬೆಳಗಾವಿ ಜಿಲ್ಲಾ ದಲಿತ ಒಕ್ಕೂಟದ ಸಂಚಾಲಕ ಸಂಜಯ ತಳವಲಕರ ಮಾತನಾಡುವಾಗ, ಮಂಗಸೂಳಿ ಗ್ರಾಮಕ್ಕೆ ಒಂದು ಇತಿಹಾಸವಿದೆ. ಈ ಗ್ರಾಮದಿಂದ ಏಕ ಕಾಲಕ್ಕೆ 4 ಶಾಸಕರು ನೀಡಿರುವ ಈ ಗ್ರಾಮವಾಗಿದ್ದು, ಇದನ್ನು ಯಾರೂ ಮರೆಯಬೇಡಿ. ಆಗೀಣ ಶಾಸಕರಾದ ಡಿ.ಬಿ.ಪವಾರದೇಸಾಯಿ, ಜೈವಂತರಾವ ಪವಾರದೇಸಾಯಿ, ಬ್ಯಾರಿಸ್ಟರ್ ಜೆ.ಡಿ.ಪಾಟೀಲ, ಸಂಪತ್ತರಾವ ತಳವಲಕರ ಇಲ್ಲಿಯವರ ಶಾಸಕರಾಗಿದ್ದರು. ಇದೇ ಗ್ರಾಮದ ಬಾಳಾಸಾಹೇಬ ಪಾಟೀಲ ಜಿಪಂ ಸದಸ್ಯರಾಗಿದ್ದರು. ತದನಂತರ ಈ ಗ್ರಾಮಕ್ಕೆ ದೊರೆತ ಯುವನೇತೃತ್ವ ರವೀಂದ್ರ ಪೂಜಾರಿ ಇವರು ತಾಪಂ ಸದಸ್ಯರು, ಜಿಪಂ ಸದಸ್ಯರು, ಎಪಿಎಂಸಿ ಸದಸ್ಯರು, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ನೇತೃತ್ವದಲ್ಲಿ ಗ್ರಾಮದ ಅಭಿವೃದ್ಧಿವಾಗಿದೆ. ಈಗ ಸ್ವಾರ್ಥಕ್ಕಾಗಿ ಗ್ರಾಮದಲ್ಲಿ ಕೆಲವರು ಹುಳಿಹಿಂಡುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಈಗ ತಕ್ಕ ಪಾಠವಾಗಿದೆಯೆಂದು ಹೇಳಿದರು.

ಮುಖಂಡರಾದ ಪಿಕೆಪಿಎಸ್ ಅಧ್ಯಕ್ಷ ಮುಕುಂದ ಪುಜಾರಿ, ತಾ.ಪಂ ಸದಸ್ಯ ಸುಧಾಕರ ಭಗತ, ಮುಖಂಡರಾದ ಸಂಜಯ ಶೆಟ್ಟಿ, ಸುನೀಲ ಚವ್ಹಾಣ, ಭರತ ಮಾಳಿ, ಬಾಬಾಸಾಹೇಬ ಸಂಕಪಾಳ, ಚಂದು ಮಾಲದಾರ, ರಶೀದ ತಾಂಬುಳಿ, ಬಾಬಾಸಾಹೇಬ ಪಾಟೀಲ, ಅಮರ ಪಾಟೀಲ, ಸೇರಿದಂತೆ ಅನೇಕ ಮುಖಂಡರು ಇದ್ದರು.

Tags:

error: Content is protected !!