Education

ಬೇಸಗೆ ರಜೆ ರದ್ದಿಲ್ಲ, ಕಡಿತಗೊಳಿಸುತ್ತೇವೆ: ಸಚಿವ ಸುರೇಶಕುಮಾರ್

Share

ಈ ವರ್ಷ ಬೇಸಗೆ ರಜೆ ರದ್ದು ಮಾಡುವುದಿಲ್ಲ. ಆದರೆ ಕಡಿತಗೊಳಿಸುವ ಚಿಂತನೆ ಇದೆ, ಕೋವಿಡ್ ಸೇರಿ ಬೇರೆ ಬೇರೆ ಕಾರಣಗಳಿಂದ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಎಲ್ಲ ಪ್ರಯತ್ನ ಜಾರಿಯಲ್ಲಿದೆ. ಮಕ್ಕಳ ಭವಿಷ್ಯ ದೃಷ್ಟಿಯಿಂದ ಎಲ್ಲ ನೆರವು ನೀಡಲು ಶಿಕ್ಷಣ ಇಲಾಖೆ ಸಿದ್ಧವಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ತಿಳಿಸಿದರು.

ಖಾನಾಪುರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಸಚಿವ ಎಸ್.ಸುರೇಶಕುಮಾರ್ ಮಾತನಾಡಿ, ಈ ವರ್ಷ ಬೇಸಗೆ ರಜೆ ರದ್ದು ಮಾಡುವುದಿಲ್ಲ. ಆದರೆ ಕಡಿತಗೊಳಿಸುವ ಚಿಂತನೆ ಇದೆ ಎಂದು ಸ್ಪಷ್ಟಪಡಿಸಿದರು.

ಬಾಲ್ಯವಿವಾಹ ತಡೆಯಲು ಈಗಾಗಲೇ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರಲು ಪೋಷಕರ ಮನವೊಲಿಸಲು ಅಧಿಕಾರಿಗಳು, ಶಿಕ್ಷಕರ ತಂಡಗಳು ನಿರಂತರ ಪ್ರಯತ್ನ ನಡೆಸಿವೆ. ಎಷ್ಟೇ ಪ್ರಯತ್ನಪಟ್ಟರೂ ಬಾಲ್ಯವಿವಾಹ ತಡೆಯಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ನಾನು ಮನಗಂಡಿದ್ದೇನೆ.

ನನ್ನ ಪರಿಚಯಸ್ಥರೊಬ್ಬರ ಮಗಳ ಬಾಲ್ಯವಿಹಾಹವನ್ನು ಖುದ್ದಾಗಿ ನಾನೇ ಎರಡು ಸಲ ತಡೆದು ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಶಿಕ್ಷಣ ಕೊಡಿಸಿ ಈಗ ಬೆಂಗಳೂರಿನ ಕಾಲೇಜಿಗೆ ಸೇರಿಸಿದ್ದೇನೆ ಎಂದು ಉದಾಹರಣೆ ಸಹಿತ ವಿವರಿಸಿದರು. ಇಲಾಖೆಗಳ ನಡುವಿನ ಸಮನ್ವಯತೆಯಿಂದ ಬಾಲ್ಯವಿವಾಹವನ್ನು ತಡೆಯಬಹುದು ಎಂದರು.

Tags:

error: Content is protected !!