Belagavi

ಬೆಳಗಾವಿ RTO ಕಚೇರಿಯಲ್ಲಿ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ

Share

ನೌಕರರ ನಿತ್ಯದ ಕಚೇರಿಗಳ ಕೆಲಸಗಳ ಜತೆಗೆ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಹೇಳಿದರು.

ನಗರದ ಆರ್‍ಟಿಓ ಕಚೇರಿ ಆವರಣದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆ ಅಂಗವಾಗಿ ಶನಿವಾರ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶಿಬಿರಕ್ಕೆ ಆರ್‍ಟಿಓ ಅಧಿಕಾರಿ ಶಿವಾನಂದ ಮಗದುಮ್ಮ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಲವು ಸಿಬ್ಬಂದಿಗಳು ನೇತ್ರ ಹಾಗೂ ಆರೋಗ್ಯ ತಪಾಸಣಾ ಮಾಡಿಸಿಕೊಂಡರು.


ಕಾರ್ಯಕ್ರಮದಲ್ಲಿ ಹಿರಿಯ ಮೋಟಾರ ವಾಹನ ನಿರೀಕ್ಷಿಕ ಎಸ್.ಡಿ. ರಾಠೋಡ, ಸಿ.ಸುನೀಳ, ಡಾ.ಚಾಂದಿನಿ ದೇವಕಿ, ಸುಜಯ ಎಸ್.ಕುಲಕರ್ಣಿ, ಯೋಗೇಶ ಆರ್. ಡಾ.ರಾಜೇಂದ್ರ ಬಾಳಿಕಾಯಿ ಸೇರಿ ಇನ್ನು ಹಲವರು ಉಪಸ್ಥಿತರಿದ್ದರು.

 

Tags:

error: Content is protected !!