ಬೆಳಗಾವಿ ನಗರದ ಮಜಗಾಂವ, ಚಿದಂಬರ ನಗರ, ಉದ್ಯಮಬಾಗ್, ಭಾಗ್ಯ ನಗರ ಪ್ರದೇಶಗಳಲ್ಲಿ ಫೆಬ್ರವರಿ 3ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ನಾಗರಿಕರು ಸಹಕರಿಸಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ತಿಳಿಸಿದ್ದಾರೆ.
ಬೆಳಗಾವಿ ಭಾಗ್ಯನಗರದ 10ನೇ ಕ್ರಾಸ್‍ನಲ್ಲಿರುವ 450 ಮಿ.ಮೀ. ವ್ಯಾಸದ ಆರ್‍ಸಿಸಿ ಕೊಳವೆ ಮಾರ್ಗದಲ್ಲಿ ಸೋರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಮಜಗಾಂವ್, ಚಿದಂಬರ ನಗರ, ಉದ್ಯಮಬಾಗ್, ಭಾಗ್ಯ ನಗರ ಪ್ರದೇಶಗಳಲ್ಲಿ ಫೆಬ್ರವರಿ 3ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಮರುದಿನ ಎಂದಿನಂತೆ ನೀರು ಪೂರೈಕೆ ಇರಲಿದೆ ಎಂದು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಾಹಿತಿ ನೀಡಿದ್ದಾರೆ.