ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಬೆಳಗಾವಿ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಗಳು ಅತ್ಯಂತ ಯಶಸ್ವಿಯಾಗಿ ಸಮಾರೋಪಗೊಂಡವು.

ಶನಿವಾರ ಸಾಯಂಕಾಲ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಡಿಸಿಪಿ ಸಿ.ಆರ್.ನೀಲಗಾರ್, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಪರುಶರಾಮ್ ದುಡಗುಂಟಿ, ಗ್ರಾಮೀಣ ಬಿಇಓ ರುದ್ರಗೌಡ ಜುಟ್ಟನವರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಎಚ್.ಡಿ.ಕೊಳೇಕರ್, ಕೃಷಿ ಮತ್ತು ಕ್ರೀಡ ಇಲಾಖೆ ಪದಾಧಿಕಾರಿಗಳಾದ ಚಂದ್ರಶೇಖರ್ ಕೋಲಕಾರ, ಆರ್.ಐ.ಬಿಸಗುಪ್ಪಿ, ಶ್ರವಣ ರಾಣವ್ವಗೋಳ, ಲಗಮಣ್ಣ ಪಂಗನ್ನವರ ಉಪಸ್ಥಿತರಿದ್ದರು.
ಈ ವೇಳೆ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ ಪಾಟೀಲ್ ಮಾತನಾಡಿ ಈ ಎರಡು ದಿನಗಳ ಸ್ಪರ್ಧೆಯಲ್ಲಿ ಎಲ್ಲಾ ತಾಲೂಕುಗಳ ನೌಕರರು ಒಳ್ಳೆಯ ರೀತಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅದೇ ರೀತಿ ಮುಂದಿನ ವರ್ಷ ಮೂರು ದಿನಗಳ ಕಾಲ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಆಯೋಜಿಸೋಣ ಎಂದರು. ಇನ್ನು ಜಿಲ್ಲಾ ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿಯೂ ಒಳ್ಳೆಯ ಪ್ರದರ್ಶನ ಮಾಡಿರಿ ಎಂದು ಶುಭ ಹಾರೈಸಿದರು.
ಬಳಿಕ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರ ಡಾ.ಅಶೋಕ್ ಕೋಲಾ ಮಾತನಾಡಿ ಜಗದೀಶಗೌಡ ಪಾಟೀಲ್ ಯಾವುದೇ ಕಾರ್ಯಕ್ರಮ ಆಯೋಜಿಸಿದ್ರೂ ಕೂಡ ಅತ್ಯಂತ ಶಿಸ್ತಿನಿಂದ ಆಯೋಜಿಸಿ ಯಶಸ್ವಿಗೊಳಿಸುತ್ತಾರೆ ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ನಮ್ಮ ಕೆಲಸದ ಒತ್ತಡದ ಮಧ್ಯದಲ್ಲಿಯೂ ಕ್ರೀಡೆಗಳಿಗೆ ಒಂದಿಷ್ಟು ಸಮಯ ಮೀಸಲಿಡುವುದು ಇಂದಿನ ದಿನದಲ್ಲಿ ಅವಶ್ಯವಾಗಿದೆ ಎಂದರು.
ಇದಾದ ನಂತರ ವಿಜೇತ ಕ್ರೀಡಾಪಟುಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಈ ವೇಳೆ ಬಸವರಾಜ್ ರಾಯವ್ವಗೋಳ, ರುದ್ರೇಶ ಹೈಬತ್ತಿ, ಮಹಾಂತೇಶ ಪುಡಕಲಕಟ್ಟಿ, ಎಸ್.ವ್ಹಿ.ಯರಡ್ಡಿ, ಶಂಕರ್ ಗೋಕಾವಿ, ಜಯಕುಮಾರ್ ಹೆಬಳಿ, ನವೀನ ಗಂಗರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.