Belagavi

ಬೆಳಗಾವಿಯಲ್ಲಿ ಶಿಕ್ಷಕ ಬಸವರಾಜ ಸುಣಗಾರ ಕೃತಿ ಲೋಕಾರ್ಪಣೆ

Share

ಬೆಳಗಾವಿಯ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಆಶ್ರಯದಲ್ಲಿ ಶಿಕ್ಷಕ, ಸಾಹಿತಿ ಬಸವರಾಜ ಎಫ್. ಸುಣಗಾರ ಅವರ ಆದರ್ಶ ಶಿಕ್ಷಕ ಒಂದು ಚಿಂತನ ಕೃತಿ ಲೋಕಾರ್ಪಣೆ ಕಾರ್ಯಕ್ರಮ, ಸಾಧಕರಿಗೆ ಸದ್ಗುರು ಕಾಯಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಿತು. ವಿಧಾನ ಪರಿಷತ್ ಸದಸ್ಯ ಡಾ.ಸಾಯಿಬಣ್ಣ ತಳವಾರ ಕಾರ್ಯಕ್ರಮ ಉದ್ಘಾಟಿಸಿದರು.

: ಬೆಳಗಾವಿಯ ಸದ್ಗುರು ಸಾಹಿತ್ಯ ಪ್ರತಿಷ್ಠಾನ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಕೃತಿ ಬಿಡುಗಡೆ ಮತ್ತು ಸಾಧಕರಿಗೆ ಸದ್ಗುರು ಕಾಯಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಭೂತರಾಮನಹಟ್ಟಿಯ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯಿತು. ವಿಧಾನ ಪರಿಷತ್ ಸದಸ್ಯ ಡಾ.ಸಾಯಿಬಣ್ಣ ತಳವಾರ ಕಾರ್ಯಕ್ರಮ ಉದ್ಘಾಟಿಸಿದರು. ಸ್ವಾಮೀಜಿ ಹಾಗೂ ಗಣ್ಯರು ಶಿಕ್ಷಕ, ಸಾಹಿತಿ ಬಸವರಾಜ ಎಫ್. ಸುಣಗಾರ ಅವರ ಆದರ್ಶ ಶಿಕ್ಷಕ ಒಂದು ಚಿಂತನ ಕೃತಿ ಲೋಕಾರ್ಪಣೆಗೊಳಿಸಿದರು.

ಶಿಕ್ಷಕ ಎಸ್.ಎಸ್.ಪಾಟೀಲ ಪುಸ್ತಕ ಪರಿಚಯಿಸಿದರು. ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಕುಮಾರಸ್ವಾಮಿ ಚರಂತಿಮಠ ಕೃತಿಕರ್ತರಿಗೆ ಅಭಿನಂದನೆ ಸಲ್ಲಿಸಿದರು. ಪತ್ರಕರ್ತ ಕಲ್ಯಾಣರಾವ್ ಮುಚಳಂಬಿ, ಸಂತೋಷ ಶ್ರೀರಾಮುಲು ಮುಖ್ಯ ಅತಿಥಿUಗಳಾಗಿದ್ದರು.

ಇದೇ ಸಂದರ್ಭದಲ್ಲಿ ಕುರಿಹಾಳದ ಶಾರದಾ ನಾರಾಯಣ ಪೋತದಾರ್, ಪ್ರಭಾವತಿ ಬಾಳಪ್ಪ ಹಾಲೆನ್ನವರ, ಸುವರ್ಣ ಹಣಮಂತ ದಶವಂತ, ವಿಜಯಾ ಆರ್.ನಾಯಕ, ಕೆ.ಎಸ್.ಗಾಯಕವಾಡ, ಎಸ್.ಟಿ.ಕೋಲಕಾರ, ರೂಪಾ ಶಿವಪ್ಪ ಕೌತಗಾರ ಅವರಿಗೆ ಸದ್ಗುರು ಕಾಯಕಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ ಯುವ ಪತ್ರಕರ್ತ ಪ್ರಶಸ್ತಿ ವಿಜೇತ ಭಾಗ್ಯಶ್ರೀ ಬಸವರಾಜ ಸುಣಗಾರ ಅವರನ್ನು ಶ್ರೀಗಳು ಅಶೀರ್ವದಿಸಿದರು.

Tags:

error: Content is protected !!