ಬೆಳಗಾವಿ ಜಿಲ್ಲಾಡಳಿತದ ವತಿಯಿಂದ 12ನೇ ಶತಮಾನದ ವಚನಕಾರ, ಅಪ್ರತಿಮ ಶರಣ ಮಡಿವಾಳ ಮಾಚಿದೇವ ಅವರ ಜಯಂತಿ ಕಾರ್ಯಕ್ರಮವನ್ನು ಬೆಳಗಾವಿ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ 12ನೇ ಶತಮಾನದ ವಚನಕಾರ, ಅಪ್ರತಿಮ ಶರಣ ಮಡಿವಾಳ ಮಾಚಿದೇವ ಅವರ ಜಯಂತಿ ಕಾರ್ಯಕ್ರಮವನ್ನು ಬೆಳಗಾವಿ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಸೋಮವಾರ ಸರಳ, ಸಂಕ್ಷಿಪ್ತವಾಗಿ ಆಚರಿಸಲಾಯಿತು.
ಮಡಿವಾಳ ಸಮಾಜದ ಪ್ರಮುಖರು,ಅಧಿಕಾರಿಗಳ ಸಮ್ಮುಖದಲ್ಲಿ ಶಿವಶರಣ ಮಡಿವಾಳ ಮಾಚಿದೇವ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಹೆಣ್ಣುಮಕ್ಕಳು ಮಂಗಳಾರತಿ ಪದ ಹೇಳಿ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ವಚನಗಳ ಮೂಲಕ ಶಿವಶರಣ ಮಡಿವಾಳ ಮಾಚಿದೇವರು ಸಮಾಜಕ್ಕೆ ನೀಡಿದ ಕೊಡುಗೆ, ಸಂದೇಶಗಳನ್ನು ಸ್ಮರಿಸಲಾಯಿತು.
ಈ ವೇಳೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಬಾಳಪ್ಪ ಮಡಿವಾಳರ, ಬಸಪ್ಪ ಬಾಳಪ್ಪ ಮಡಿವಾಳರ, ಮಹಾದೇವಿ ಚ. ಮಠದ, ಗೌರಿ ಉಳ್ಳಾಗಡ್ಡಿ, ಅಶೋಕ ಗಡೆಮ್ಮನವರ ಮತ್ತು ಮಡಿವಾಳ ಸಮಾಜದ ಪ್ರಮುಖರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.