ಬೆಳಗಾವಿ ಎಜ್ಯೂಕೇಶನ್ ಸೊಟೈಟಿಯ 96ನೇ ಸಂಸ್ಥಾಪನಾ ದಿನಾಚರಣೆಯನ್ನು ಬಿ.ಕೆ.ಮಾಡೆಲ್ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅತಿಥಿಗಳಾಗಿದ್ದ ಪಿ.ಜೆ.ಜಾಬಿನ್ ಹಾಗೂ ವಿದ್ಯಾ ಬುರ್ಜಿ ಅವರನ್ನು ಸನ್ಮಾನಿಸಲಾಯಿತು.
ಬೆಳಗಾವಿ ಬಿ.ಕೆ.ಮಾಡೆಲ್ ಶಾಲೆಯ ಧರ್ಮಾಜಿ ಅನಗೋಳ ಮಾಸ್ಟರ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೆಳಗಾವಿ ಎಜ್ಯೂಕೇಶನ್ ಸೊಟೈಟಿಯ 96ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಅತಿಥಿಗಳಾಗಿದ್ದ ಪಿ.ಜೆ.ಜಾಬಿನ್ ಹಾಗೂ ವಿದ್ಯಾ ಬುರ್ಜಿ ಅವರನ್ನು ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಶಿವಣಗಿ, ಉಪಾಧ್ಯಕ್ಷ ಸುಧೀರ್ ಕುಲಕರ್ಣಿ ಮತ್ತು ಗಣ್ಯರು ಸನ್ಮಾನಿಸಲಾಯಿತು.
ಈ ವೇಳೆ ಸನ್ಮಾನ ಸ್ವೀಕರಿಸಿದ ಪಿ.ಜೆ.ಜಾಬಿನ್ ಮಾತನಾಡಿ, ಬೆಳಗಾವಿ ಎಜ್ಯೂಕೇಶನ್ ಸೊಟೈಟಿ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯಿಂದ ಜನಾನುರಾಗಿಯಾಗಿದೆ. ದೇಶ ವಿದೇಶಗಳಲ್ಲೂ ಜನಪ್ರೀತಿ ಸಂಪಾದಿಸಿ ಮುನ್ನಡೆದಿದೆ. ಗುಣಮಟ್ಟದ ಶಿಕ್ಷಣ, ಸುಸಂಸ್ಕøತ ಮತ್ತು ಸಂಪನ್ನ ಸಮಾಜದ ಕನಸು ಕಂಡಿದ್ದ ಸಂಸ್ಥಾಪಕರ ಉದ್ದೇಶ ಈಡೇರಿದೆ. ಇದಕ್ಕಿಂತ ದೊಡ್ಡ ಭಾಗ್ಯ ಇನ್ನೊಂದಿಲ್ಲ. ಸಂಸ್ಥೆಯನ್ನು ಎತ್ತರೆತ್ತರಕ್ಕೆ ಬೆಳೆಸಲು ಶಿಕ್ಷಣ ಕ್ಷೇತ್ರದ ಅನೇಕ ಮಹನೀಯರು ದುಡಿದಿದ್ದಾರೆ. ಅವರ ಶ್ರಮ ಸಾರ್ಥಕವಾಗಿದೆ ಎಂದರು.
ಇದೇ ವೇಳೆ ಎಸ್‍ಎಸ್‍ಎಲ್‍ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಸಂಸ್ಥೆಯ ಕೀರ್ತಿ ಪತಾಕೆ ಎತ್ತಿ ಹಿಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಭವಿಷ್ಯ ಜೀವನಕ್ಕೆ ಶುಭ ಹಾರೈಸಲಾಯಿತು.
ಮುಖ್ಯೋಪಾಧ್ಯಾಯರಾದ ಎಸ್.ಎ.ಚಾಟೆ, ಎಂ.ಕೆ.ಮಾದಾರ, ಆರ್.ಆರ್.ನಾಯಕ, ಎಸ್.ಎಸ್.ಪಂಘರಿ, ಎಂ.ಡಿ.ವಡೇರ್, ಡಾ.ಎಸ್.ಕೆ ಹುಕ್ಕೇರಿ ಪಾಲ್ಗೊಂಡಿದ್ದರು.