ಯುವಕನೋರ್ವ ಬೌಡಿಯಲ್ಲಿ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ನಗರದ ಜಾಮೀಯಾ ಮಸೀದಿ ಹತ್ತಿರದ ಶಾಹಿ ಬೌಡಿಯಲ್ಲಿ ನಡೆದಿದೆ.
ನಗರದ ಚಪ್ಪರಬಂದ್ ನಿವಾಸಿ ಮಹಮ್ಮದ್ ರಫೀಕ್ ರಸೂಲ್ ಆತ್ಮಹತ್ಯೆಗೆ ಶರಣಾಗಿರುವ ಯುವಕ. ಇನ್ನು ಆತ್ಮಹತ್ಯೆಗೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ. ಈ ಕುರಿತು ಗೋಳಗುಮ್ಮಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.