ರೈತರನ್ನು ಉಗ್ರವಾದಿಗಳು ಎಂದು ಕರೆದಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಬೆಳಗಾವಿ ಟಿಳಕವಾಡಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರೈತರನ್ನು ಉಗ್ರವಾದಿಗಳು ಎಂದು ಕರೆದಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಬೆಳಗಾವಿ ಟಿಳಕವಾಡಿ ಪೊಲಿಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
ಟಿಳಕವಾಡಿ ಪೊಲಿಸ್ರು ದೂರು ಸ್ವೀಕರಿಸಿದ್ದು, ತಕ್ಷಣ ಎಫ್‍ಐಆರ್ ದಾಖಲಿಸಬೇಕು ಎಂದು ವಕೀಲ ಹರ್ಷವರ್ಧನ ಪೊಲಿಸ್ರಿಗೆ ಮನವಿ ಮಾಡಿದ್ದಾರೆ. ನಟಿ ಕಂಗಾನಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153, 154ಂ, 503, 504, 505(1), 505 (ಬಿ), 505(ಅ), 505(2), 506 ಅಡಿ ಕೇಸ್ ದಾಖಲಿಸಲಾಗಿದೆ.
ಈ ವೇಳೆ ವಕೀಲ ಹರ್ಷವರ್ಧನ ಪಾಟೀಲ ಮಾತನಾಡಿ, ತಮ್ಮ ಬದುಕಿಗೆ ಮಾರಕವಾಗಿರುವ ಕೃಷಿ ಕಾನೂನುಗಳನ್ನು ವಿರೋಧಿಸಿದ ರೈತರನ್ನು ಬಾಲಿವುಡ್ ನಟಿ ಕಂಗಾನಾ ರಣಾವತ್ ಉಗ್ರವಾದಿಗಳು ಎಂದು ಕರೆದಿದ್ದಾರೆ. ಕೂಡಲೇ ಇದಕ್ಕಾಗಿ ಅವರಿಗೆ ಶಿಕ್ಷೆಯಾಗಬೇಕು. ಇನ್ನು ದೇಶ ಒಡೆದ ಮನೆಯಾಗಿದೆ ಎಂದು ನಟಿ ಕಂಗಾನಾ ಹೇಳಿದ್ದಾರೆ. ಇಡೀ ಜಗತ್ತಿನಲ್ಲಿ ಬಲಾಢ್ಯ ಸೇನಾ ಬಲ, ಮಾನವ ಸಂಪನ್ಮೂಲ, ನಿಸರ್ಗ ಸಂಪನ್ಮೂಲ ಹೊಂದಿದ ಭಾರತವನ್ನು ನಟಿಯೊಬ್ಬರು ಅವಮಾನಿಸಿದ್ದಾರೆ. ಇದಕ್ಕಾಗಿ ಅವರು ಜನರ ಕ್ಷಮೆ ಕೇಳಬೇಕು. ನಮ್ಮ ಸೇನಾ ಬಲದ ಕ್ಷಮೆ ಕೇಳಬೇಕು. ಎಫ್‍ಐಆರ್ ದಾಖಲು ಆಗದೇ ಇದ್ರೆ ಕೋರ್ಟ್ ಮೊರೆ ಹೋಗುತ್ತೇನೆ. ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇದೆ. ಆದರೆ ಇದು ದುರುಪಯೋಗ ಆಗಬಾರದು ಎಂದು ಹೇಳಿದರು. ಟ್ವಿಟರ್‍ನಿಂದ ನಟಿ ಕಂಗನಾ ರಣಾವತ್ ಬ್ಯಾನ್ ಮಾಡಬೇಕು ಎಂದು ವಕೀಲ ಹರ್ಷವರ್ಧನ ಪಾಟೀಲ ಆಗ್ರಹಿಸಿದರು.
ಒಟ್ಟಿನಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದ ನಟಿ ಕಂಗಾನಾ ವಿರುದ್ಧ ಕಾನೂನು ಹೋರಾಟ ನಿಶ್ಚಿತ. ಇದರಲ್ಲಿ ಯಾವುದೇ ರಾಜೀ ಇಲ್ಲ ಎಂದು ಯುವ ವಕೀಲ ಹರ್ಷವರ್ಧನ ಪಾಟೀಲ ಖಡಕ್ ಸಂದೇಶ ರವಾನಿಸಿದ್ದಾರೆ.